revive ರಿವೈವ್‍
ಅಕರ್ಮಕ ಕ್ರಿಯಾಪದ
  1. ಎಚ್ಚತ್ತುಕೊ; ಮತ್ತೆ ಪ್ರಜ್ಞೆಗೆ ಬರು; ಮೂರ್ಛೆಯಿಂದ ಯಾ ಪ್ರಜ್ಞಾಹೀನಸ್ಥಿತಿಯಿಂದ ಎಚ್ಚರಗೊಳ್ಳು.
  2. ಪುನರ್ಜನ್ಮ ಪಡೆ; ಮತ್ತೆ ಬದುಕಿಕೊ; ಮತ್ತೆ ಜೀವಂತಸ್ಥಿತಿಗೆ ಬರು; (ಸತ್ತ ಮೇಲೆ) ಪುನಃ ಜೀವಂತವಾಗು.
  3. ಪುನರುಜ್ಜೀವಿಸು; ಮರುಹುಟ್ಟು ಪಡೆ; ಪುನರುದಯಿಸು; ನಷ್ಟವಾಗಿಬಿಡುವುದರಲ್ಲಿದ್ದು ಯಾ ಗತಿಸಿ ಹೋಗುವುದರಲ್ಲಿದ್ದು ಪುನಃ ಹೊಸ ಹುರುಪು, ಶಕ್ತಿ ಪಡೆ (ರೂಪಕವಾಗಿ ಸಹ).
  4. ಚೇತರಿಸಿಕೊ; ಪುನಶ್ಚೈತನ್ಯಗೊಳ್ಳು; ಹೊಸ ಧೈರ್ಯ. ಶಕ್ತಿ ತಾಳು; ಮನಸ್ಸಿನ ಖಿನ್ನತೆ ಮೊದಲಾದವುಗಳಿಂದ ಹೊರಬರು.
  5. (ಭಾವಗಳು, ಪ್ರತ್ತಿಗಳು ಮೊದಲಾದವುಗಳ ವಿಷಯದಲ್ಲಿ) ಮತ್ತೆ ಚಟುವಟಿಕೆಗಳನ್ನು ಪ್ರಾರಂಭಿಸು; ಪುನಃ–ಕಾರ್ಯನಿರತವಾಗು, ಕಾರ್ಯಕಾರಿಯಾಗು, ಕಾರ್ಯಾಚರಣೆಯಲ್ಲಿ ತೊಡಗು.
  6. ಮತ್ತೆ ಏಳಿಗೆಗೆ ಬರು; ಪುನರೂರ್ಜಿತವಾಗು; ಅವನತಿಯ ತರುವಾಯ ಮತ್ತೆ ಹೊಸ ಜೀವ, ಶಕ್ತಿ, ಏಳಿಗೆ ಪಡೆ.
  7. (ಸ್ವಲ್ಪಕಾಲ ಅಶ್ಯವಾಗಿದ್ದ ತರುವಾಯ) ಮತ್ತೆ ಕಾಣಿಸಿಕೊ; ಮರೊಕಳಿಸು; ಮತ್ತೆ ಬರು; ಪುನರುದಯಿಸು; ಹಿಂದಿರುಗು: the days of drama seem to be reviving there ನಾಟಕದ ದಿನಗಳು ಅಲ್ಲಿ ಮತ್ತೆ ಬರುತ್ತಿರುವಂತೆ ಕಾಣುತ್ತದೆ.
  8. (ನ್ಯಾಯಶಾಸ್ತ್ರ) ಪುನರೂರ್ಜಿತವಾಗು; ಮತ್ತೆ ಕ್ರಮಬದ್ಧವಾಗು.
  9. ಮತ್ತೆ ನೆನಪಿಗೆ, ಬಳಕೆಗೆ–ಬರು.
ಸಕರ್ಮಕ ಕ್ರಿಯಾಪದ
  1. (ಮೂರ್ಛೆಯಿಂದ, ಜ್ಞಾನಹೀನಸ್ಥಿತಿಯಿಂದ) ಎಚ್ಚರಕ್ಕೆ ತರು; ಪ್ರಜ್ಞೆ ಬರಿಸು.
  2. ಮತ್ತೆ ಬದುಕಿಸು; ಪುನಃ–ಜೀವಂತಗೊಳಿಸು, ಸಜೀವಗೊಳಿಸು.
  3. ಪುನಶ್ಚೈತನ್ಯಗೊಳಿಸು; ಚೇತರಿಸು; ಹೊಸ ಹುರುಪು, ಚೈತನ್ಯ, ಜೀವ, ಶಕ್ತಿ-ತುಂಬು; ಆಲಸ್ಯ, ಖಿನ್ನತೆ, ದುಃಖಮಗ್ನತೆ ಮೊದಲಾದವುಗಳನ್ನು ಪರಿಹರಿಸಿ ಮೊದಲಿನ ಉತ್ಸಾಹದ ಸ್ಥಿತಿಗೆ ತರು.
  4. ಪುನರುಜ್ಜೀವಿಸು; ಜೀರ್ಣೋದ್ಧಾರ ಮಾಡು.
  5. ಮತ್ತೆ ಕೆಲಸ ಮಾಡುವಂತೆ ಮಾಡು; ಪುನಃ ಕಾರ್ಯನಿರತವಾಗಿಸು.
  6. (ನ್ಯಾಯಶಾಸ್ತ್ರ) (ಕಾನೂನು ಮೊದಲಾದವನ್ನು) ಪುನರೂರ್ಜಿತಗೊಳಿಸು; ಮತ್ತೆ ಕ್ರಮಬದ್ಧವಾಗುವಂತೆ ಮಾಡು.
  7. (ಆಸೆ ಮೊದಲಾದವನ್ನು) ಮತ್ತೆ–ಎಬ್ಬಿಸು, ಎಚ್ಚರಗೊಳಿಸು; ಪುನಃ ಜಾತಗೊಳಿಸು.
  8. ಮತ್ತೆ ಅಸ್ತಿತ್ವಕ್ಕೆ, ಗಮನಕ್ಕೆ, ನೆನಪಿಗೆ, ಬಳಕೆಗೆ–ತರು.
  9. (ಹಳೆಯ ನಾಟಕ, ಸಿನಿಮಾಗಳನ್ನು) ಪುನಃ ಪ್ರದರ್ಶಿಸು; ಮತ್ತೆ ಆಡು, ತೋರಿಸು.