revival ರಿವೈವಲ್‍
ನಾಮವಾಚಕ
  1. ಮರುಹುಟ್ಟು; ಪುನರುದಯ; ಪುನರುಜ್ಜೀವನ; ಪುನರ್ಜಾತಿ.
  2. (ಹಳೆಯ ನಾಟಕ, ಚಲನಚಿತ್ರ ಮೊದಲಾದವುಗಳ) ಪುನಃಪ್ರದರ್ಶನ; ಮರುಪ್ರದರ್ಶನ.
  3. ಧರ್ಮ ಜಾತಿ; ಮತಶ್ರದ್ಧೆಯ ಪುನರುಜ್ಜೀವನ; ಮತಾಸಕ್ತಿಯ ಪುನರುದಯ: a religious revival ಧಾರ್ಮಿಕ ಜಾತಿ.
  4. ಧರ್ಮಜಾತಿ ಪ್ರಯತ್ನ; ಮತದಲ್ಲಿ ಮತ್ತೆ ಆಸಕ್ತಿಯನ್ನು ಹುಟ್ಟಿಸಲು ಸಭೆ, ಗೋಷ್ಠಿ ಮೊದಲಾದವುಗಳ ಮೂಲಕ ಮಾಡುವ ವಿಶೇಷ ಪ್ರಯತ್ನ: revival meeting ಧರ್ಮಜಾತಿ ಸಭೆ.
  5. ಪುನರುಜ್ಜೀವನ; ಮತ್ತೆ ಹೊಸದಾಗಿ ಪ್ರಚಾರಕ್ಕೆ, ಬಳಕೆಗೆ–ಬರುವುದು, ತರುವುದು.
  6. ಚೇತರಿಕೆ; ಪುನಶ್ಚೈತನ್ಯಗೊಳಿಕೆ; ಮೊದಲಿನ ಆರೋಗ್ಯಕ್ಕೆ, ಹುರುಪಿಗೆ, ಚಟುವಟಿಕೆಗೆ–ಬರುವುದು, ತರುವುದು,
  7. ಪುನಃ ಜೀವನಸ್ಥಿತಿಗೆ, ಪ್ರಜ್ಞೆಯ ಸ್ಥಿತಿಗೆ–ಬರುವುದು, ತರುವುದು.
  8. (ನ್ಯಾಯಶಾಸ್ತ್ರ) ಪುನರೂರ್ಜನ; ಪುನಃಪ್ರವರ್ತನ; ಪುನಃಸ್ಥಾಪನೆ; ಕಾನೂನಿನ ಅಧಿಕಾರ ಮತ್ತು ಶಕ್ತಿಯನ್ನು ಮತ್ತೆ ಊರ್ಜಿತಗೊಳಿಸುವುದು, ಸ್ಥಾಪಿಸುವುದು.
  9. ನವಚೈತನ್ಯ; ಹೊಸ-ಹುರುಪು, ಜೀವ, ಆಸಕ್ತಿ.