revisionism ರಿವಿಷನಿಸಮ್‍
ನಾಮವಾಚಕ

ಪರಿಷ್ಕರಣ ವಾದ; ಸಂಸ್ಕರಣ ನೀತಿ:

  1. ತಿದ್ದುಪಡಿ ಯಾ ಬದಲಾವಣೆ ಮಾಡುವ ಧೋರಣೆ.
  2. (ಹೀನಾರ್ಥಕ ಪ್ರಯೋಗ) (ಕಮ್ಯೂನಿಸ್ಟರಲ್ಲಿ) ಸುಧಾರಣಾ ವಾದ; ಮುಖ್ಯವಾಗಿ ಮಾರ್ಕ್ಸ್‍ ಮತ್ತು ಲೆನಿನ್‍ರ ತತ್ತ್ವಗಳನ್ನು, ಸಿದ್ಧಾಂತವನ್ನು ಕ್ರಾಂತಿಕಾರಿ ಸೂತ್ರಗಳಿಗೆ ಬದಲಾಗಿ ವಿಕಾಸಾತ್ಮಕ ಸೋಷಿಯಲಿಸ್ಟ್‍ ಸೂತ್ರಗಳ ಪ್ರಕಾರ ತಿದ್ದುವ ಯಾ ಬದಲಾಯಿಸುವ ನೀತಿ, ಧೋರಣೆ.