See also 2revise
1revise ರಿವೈಸ್‍
ಸಕರ್ಮಕ ಕ್ರಿಯಾಪದ
  1. (ಬರೆದ ಯಾ ಮುದ್ರಿತ ವಿಷಯವನ್ನು ತಿದ್ದಲು ಯಾ ಉತ್ತಮಗೊಳಿಸಲು) ಮತ್ತೆ ಓದು ಯಾ ನೋಡು; ಪರಿಶೋಧಿಸು; ಪರಿಶೀಲಿಸು.
  2. (ಪುನಃ ಪರಿಶೀಲಿಸಿ) ತಿದ್ದು; ಸರಿಪಡಿಸು; ಪರಿಷ್ಕರಿಸು; ಸುಧಾರಿಸು; ಸಂಸ್ಕರಿಸು.
  3. (ಬ್ರಿಟಿಷ್‍ ಪ್ರಯೋಗ) (ಓದಿದ ಯಾ ಬರೆದ ತಿಯನ್ನು, ಇನ್ನೂ ಚೆನ್ನಾಗಿ ತಿಳಿದುಕೊಳ್ಳುವುದು, ಅದರ ಗುಣಗಳನ್ನು ಕಂಡುಕೊಳ್ಳುವುದು ಮೊದಲಾದವಕ್ಕಾಗಿ) ಮತ್ತೆ ಓದು; ಪುನಃಪಠಿಸು; ಪುನರಧ್ಯಯನ ಮಾಡು.
See also 1revise
2revise ರಿವೈಸ್‍
ನಾಮವಾಚಕ
  1. (ವಿರಳ ಪ್ರಯೋಗ) ಪರಿಷ್ಕರಣ; ಸಂಸ್ಕರಣ; ಪರಿಷ್ಕರಿಸುವುದು.
  2. (ವಿರಳ ಪ್ರಯೋಗ) ಪರಿಷ್ಕೃತ ರೂಪ.
  3. (ಮುದ್ರಣ) ತಿದ್ದಿದ, ಪರಿಷ್ಕೃತ–ಕರಡಚ್ಚು (ಹಾಳೆ); ಹಿಂದಿನ ಕರಡಚ್ಚಿನಲ್ಲಿದ್ದ ತಪ್ಪುಗಳನ್ನು ತಿದ್ದಿ, ಸರಿಪಡಿಸಿ ಸಿದ್ಧಗೊಳಿಸಿದ ಕರಡಚ್ಚು ಹಾಳೆ; ತಿದ್ದಿದ ಪ್ರೂಹು.