See also 2revert
1revert ರಿವರ್ಟ್‍
ಸಕರ್ಮಕ ಕ್ರಿಯಾಪದ

(ಕಣ್ಣು, ಹೆಜ್ಜೆಗಳನ್ನು) ಹಿಂದಿರುಗಿಸು.

ಅಕರ್ಮಕ ಕ್ರಿಯಾಪದ
  1. (ವಿರಳ ಪ್ರಯೋಗ) (ಒಂದು ಸ್ಥಳದಿಂದ) ಹಿಂದಕ್ಕೆ ಹೋಗು; ಹಿಂದಿರುಗು; ವಾಪಸು ಹೋಗು.
  2. (ನ್ಯಾಯಶಾಸ್ತ್ರ) (ಆಸ್ಥಿ, ಅಧಿಕಾರ, ಹುದ್ದೆ ಮೊದಲಾದವುಗಳ ವಿಷಯದಲ್ಲಿ) ಹಿಮ್ಮರಳಿಕೆಯಿಂದ, ಪ್ರತ್ಯಾವರ್ತನೆಯಿಂದ–ಬರು, ಲಭಿಸು; ನಿರ್ದಿಷ್ಟ ಕಾಲದಲ್ಲಿ ಯಾ ಸಂದರ್ಭಗಳಲ್ಲಿ ಮೂಲ ವಾರಸುದಾರ, ಸರ್ಕಾರ ಮೊದಲಾದವಕ್ಕೆ ವಾಪಸಾಗು: if he dies without an heir, his property will revert to the State ಉತ್ತರಾಧಿಕಾರಿಯಿಲ್ಲದೆ ಅವನು ಸತ್ತರೆ, ಅವನ ಆಸ್ತಿ ಸರ್ಕಾರಕ್ಕೆ ಮರಳುತ್ತದೆ.
  3. ಪೂರ್ವಸ್ಥಿತಿ ಮೊದಲಾದವಕ್ಕೆ ಹಿಂದಿರುಗು, ಬರು: the fields have reverted to moorland ಹೊಲಗದ್ದೆಗಳು ಬಂಜರುಗಾವಲಿನ ಸ್ಥಿತಿಗೆ ಹಿಂದಿರುಗಿದವು (ಅಂದರೆ ಅವುಗಳಲ್ಲಿ ವ್ಯವಸಾಯ ನಿಂತುಹೋಯಿತು).
  4. ಪಾಳು ಬೀಳು; ಮತ್ತೆ ಕಾಡಾಗು; ಷಿಯಿಲ್ಲದ ಸ್ಥಿತಿಗೆ ಮರಳು: unless ploughed from time to time, the ground will revert ಕಾಲಕಾಲಕ್ಕೆ ಉಳದಿದ್ದಲ್ಲಿ ಭೂಮಿ ಪಾಳು ಬೀಳುತ್ತದೆ.
  5. (ಜೀವವಿಜ್ಞಾನ) ಪ್ರತ್ಯಾವರ್ತಿಸು; ಪುನರಾವರ್ತನೆ ತೋರು; ಆರಂಭಕಾಲದ ಪ್ರಾತ ರೂಪಕ್ಕೆ ಹಿಂದಿರುಗು; ಮೂಲ ಸಂತತಿಯ ಲಕ್ಷಣಗಳನ್ನು ಮತ್ತೆ ಧರಿಸು, ತೋರು.
  6. (ಮಾತಿನಲ್ಲಿ ಯಾ ಆಲೋಚನೆಯಲ್ಲಿ) ವಿಷಯಕ್ಕೆ–ಮರಳು, ಮತ್ತೆ ಹೋಗು, ಹಿಂದಕ್ಕೆ ಬರು: reverting to your original statement ನಿನ್ನ ಮೂಲ ಹೇಳಿಕೆಗೆ ಮತ್ತೆ ಬರುತ್ತ.
See also 1revert
2revert ರಿವರ್ಟ್‍
ನಾಮವಾಚಕ

ಪುನಸ್ಸ್ವಮತಾವಲಂಬಿ; ತನ್ನ ಮೊದಲಿನ ಧರ್ಮಕ್ಕೇ ಹಿಂದಿರುಗುವವನು.