reversion ರಿವರ್ಷನ್‍
ನಾಮವಾಚಕ
  1. ಪ್ರತ್ಯಾವರ್ತಿ, ಸಾವಧಿಕ, ಹಿಮ್ಮರಳುವ, ವಾಪಸಾಗುವ– ಆಸ್ತಿ; ನಿರ್ದಿಷ್ಟತೇದಿಯ ಯಾ ಘಟನೆಯ ವರೆಗೆ (ಮುಖ್ಯವಾಗಿ ಮೂಲದಾತನ ಮರಣದವರೆಗೆ) ಕೊಟ್ಟಿರುವ ಆಸ್ತಿ.
  2. (ನ್ಯಾಯಶಾಸ್ತ್ರ) ಆಸ್ತಿಯ ಪ್ರತ್ಯಾವರ್ತನೆ; ಆಸ್ತಿಯ–ಹಿಮ್ಮರಳಿಕೆ, ವಾಪಸು; ಕಾನೂನುಬದ್ಧ ಅನುಭೋಗದ ಹಕ್ಕು ತೀರಿದ ತರುವಾಯ ಆಸ್ತಿಯು ಅದರ ಮೂಲ ದಾತನಿಗೆ ಯಾ ಅವನ ಉತ್ತರಾಧಿಕಾರಿಗೆ ಯಾ ಕಟ್ಟಕಡೆಯ ಬಾಧ್ಯಸ್ಥನಿಗೆ (ಶೇಷಾನುಭೋಗಿಗೆ) ಮರಳುವುದು, ವಾಪಸಾಗುವುದು.
  3. (ನ್ಯಾಯಶಾಸ್ತ್ರ) (ಪ್ರತ್ಯಾತ್ತ ಆಸ್ತಿಗೆ) ಕಟ್ಟಕಡೆಯ–ಉತ್ತರಾಧಿಕಾರ, ವಾರಸುಹಕ್ಕು.
  4. ಮರಣೋತ್ತರ ಧನ; ಒಬ್ಬನ ಮರಣಾನಂತರ ಕೊಡುವ (ಮುಖ್ಯವಾಗಿ ಜೀವವಿಮೆಯ ರೂಪದ) ಹಣ.
  5. ವಾರಸುವಸ್ತು; ಹಕ್ಕಿನ ಪದಾರ್ಥ; ತನಗೆ ಹಕ್ಕಿರುವ ಯಾ ಮತ್ತೊಬ್ಬನು ತ್ಯಜಿಸಿದ ಮೇಲೆ ಅದಕ್ಕೆ ತನಗೆ ಉತ್ತರಾಧಿಕಾರ ಬರುವುದೆಂದು ನಿರೀಕ್ಷಿಸಿರುವ ವಸ್ತು.
  6. (ಸ್ವಂತ ಹಕ್ಕಿನಿಂದ ಯಾ ಮತ್ತೊಬ್ಬನು ತ್ಯಜಿಸಿದ ಮೇಲೆ ಒಂದು ವಸ್ತುವಿನ ಬಗ್ಗೆ ಬರುವ) ವಾರಸುತನ; ವಾರಸಿಕೆ; ಉತ್ತರಾಧಿಕಾರ.
  7. ಮರುಕಳಿಕೆ; ಪುನರಾವರ್ತನೆ; ಪ್ರತ್ಯಾವರ್ತನೆ; ಪೂರ್ವದ ಸ್ಥಿತಿ, ಮೊದಲಿನ ಅಭ್ಯಾಸ ಮೊದಲಾದವುಗಳಿಗೆ ಮರಳುವುದು.
  8. (ಜೀವವಿಜ್ಞಾನ) ಪ್ರತ್ಯಾವರ್ತನೆ; ಪುನರಾವರ್ತನೆ; ಮರಳಿಕೆ; ನಡುವಣ ಪೀಳಿಗೆಗಳಲ್ಲಿ ಅಶ್ಯವಾಗಿದ್ದ ಮೂಲಜರ ಗುಣಲಕ್ಷಣಗಳು ಮತ್ತೆ ಕಾಣಿಸಿಕೊಳ್ಳುವುದು, ಮರಳುವುದು.