See also 2reverence
1reverence ರೆವರನ್ಸ್‍
ನಾಮವಾಚಕ
  1. ಭಯಭಕ್ತಿ; ಪೂಜ್ಯಬುದ್ಧಿ; ಪವಿತ್ರ ಭಾವನೆ; ಗೌರವಾದರ: hold in (or regard with) reverence ಪವಿತ್ರವಾಗಿ–ಭಾವಿಸು, ಕಾಣು. feel reverence for ಪೂಜ್ಯಬುದ್ಧಿ ತಾಳು. pay reverence to ಭಯಭಕ್ತಿ ತೋರು.
  2. ಭಯಭಕ್ತಿ ಭಾವವನ್ನು ಹೊಂದಿರುವ ಯಾ ತೋರುವ ಶಕ್ತಿ: the younger generation lacks reverence ಯುವಕ ಪೀಳಿಗೆಯವರಿಗೆ ಭಯಭಕ್ತಿ ಇಲ್ಲ.
  3. (ಪ್ರಾಚೀನ ಪ್ರಯೋಗ) ನಮಸ್ಕಾರ; ಪ್ರಣಾಮ; ಅಡ್ಡಬೀಳುವುದು; ಗೌರವಾದರ ತೋರುವ ವರ್ತನೆ, ಮುದ್ರೆ.
  4. ಪೂಜ್ಯತೆ; ಭಯ ಭಕ್ತಿ, ಗೌರವಾದರ–ಪಡೆದಿರುವುದು.
  5. (Reverence) ಕ್ರೈಸ್ತ ಪುರೋಹಿತನ ಒಂದು ಉಪಾಧಿ ಯಾ ಮರ್ಯಾದೆಯ ಒಕ್ಕಣೆ: your Reverence ಪೂಜ್ಯರಾದ ನೀವು. his Reverence ಆ ಪೂಜ್ಯ.
See also 1reverence
2reverence ರೆವರನ್ಸ್‍
ಸಕರ್ಮಕ ಕ್ರಿಯಾಪದ

ಪೂಜ್ಯಬಾವನೆಯಿಂದ ಕಾಣು; ಭಯಭಕ್ತಿ ತೋರು.