reverberation ರಿವರ್ಬರೇಷನ್‍
ನಾಮವಾಚಕ
  1. (ಶಬ್ದದ) ಮರುದನಿಕೆ; ಪ್ರತಿಧ್ವನನ.
  2. (ಬೆಳಕಿನ, ಶಾಖದ) ಪ್ರತಿಫಲನ.
  3. ಮರಳಿಕೆ; ಹಿಂದಕ್ಕೆ ಕಳುಹಿಸುವುದು.
  4. ಪ್ರತಿಫಲಕ ಕುಲುಮೆಯಲ್ಲಿ ಪದಾರ್ಥವನ್ನು ಶಾಖಕ್ಕೆ ಒಳಪಡಿಸುವುದು.
  5. ಹೊಳಲು; ಮರುದನಿ; ಪ್ರತಿಧ್ವನಿ.
  6. ಪ್ರತಿಫಲಿತ ಬೆಳಕು.
  7. (ಬಹುವಚನದಲ್ಲಿ) ಹೊಳಲುಗಳು; ಪ್ರತಿಧ್ವನಿಗಳು; ಮರುದನಿಗಳು.
  8. (ಬಹುವಚನದಲ್ಲಿ) ಪ್ರತಿಕ್ರಿಯೆಗಳು; ಪರಿಣಾಮಗಳು.