reverberate ರಿವರ್ಬರೇಟ್‍
ಸಕರ್ಮಕ ಕ್ರಿಯಾಪದ
  1. (ಶಬ್ದ ಯಾ ಧ್ವನಿಯನ್ನು) ಮರಳಿಸು; ಹಿಂದಕ್ಕೆ ಕಳುಹಿಸು; ಪ್ರತಿಧ್ವನಿಸು; ಮರುದನಿಸು; ಮರುದನಿ, ಹೊಳಲು–ಕೊಡು.
  2. (ಬೆಳಕು, ಶಾಖ ಮೊದಲಾದವನ್ನು) ಮರಳಿಸು; ಪ್ರತಿಫಲಿಸು; ಹಿಂದಕ್ಕೆ–ಕಳುಹು, ಹೊಡೆ.
  3. (ಪದಾರ್ಥವನ್ನು) ಪ್ರತಿಫಲಕ ಕುಲುಮೆಗೆ ಒಡ್ಡು; ಪ್ರತಿಫಲಿತ ಶಾಖಕ್ಕೆ ಒಳಪಡಿಸು.
ಅಕರ್ಮಕ ಕ್ರಿಯಾಪದ
  1. (ಧ್ವನಿಯ ವಿಷಯದಲ್ಲಿ) ಮರಳು; ಪ್ರತಿಧ್ವನಿಸು; ಮರುದನಿಸು; ಮರುದನಿ, ಹೊಳಲು–ಕೊಡು.
  2. (ಬೆಳಕು, ಶಾಖ ಮೊದಲಾದವುಗಳ ವಿಷಯದಲ್ಲಿ) ಮರಳು; ಪ್ರತಿಫಲಿಸು; ಹಿಂದಕ್ಕೆ ಬರು.
  3. (ಗಾಳಿಸುದ್ದಿ, ಕಟ್ಟುಕಥೆ ಮೊದಲಾದವುಗಳ ವಿಷಯದಲ್ಲಿ) ಬಹಳ ಯಾ ಮತ್ತೆ ಮತ್ತೆ ಕೇಳಿಬರು.
  4. (ವಿರಳ ಪ್ರಯೋಗ) (ಭಾವ ಮೊದಲಾದವುಗಳ ವಿಷಯದಲ್ಲಿ) ಪ್ರತಿವರ್ತಿಸು; ಪ್ರತಿಕ್ರಿಯೆ ತೋರು; ಹಿಂದಕ್ಕೆ ಬಂದು ಅದೇ ಪರಿಣಾಮ ಬೀರು.
  5. (ಚೆಂಡು ಮೊದಲಾದವುಗಳ ವಿಷಯದಲ್ಲಿ) ಪುಟಗೊಡು; ಪುಟವೇಳು; ಹಿಂದಕ್ಕೆ–ಹಾರು, ಚಿಮ್ಮು.