revenue ರೆವನ್ಯೂ
ನಾಮವಾಚಕ
  1. (ಆಸ್ತಿ, ನೌಕರಿ ಮೊದಲಾದವುಗಳಿಂದ ಬರುವ) ಹುಟ್ಟುವಳಿ; ಆದಾಯ; ವರಮಾನ; ಆಯ; ಉತ್ಪತ್ತಿ.
  2. (ಬಹುವಚನದಲ್ಲಿ) ಆದಾಯದ ಒಟ್ಟು ಬಾಬುಗಳು; ಒಟ್ಟುಗೂಡಿಸಿದ ಆದಾಯದ ಬಿಡಿಬಿಡಿ ಬಾಬುಗಳು: the revenues of the city council ನಗರಸಭೆಯ ಒಟ್ಟು ಆದಾಯದ ಬಾಬುಗಳು.
  3. ರಾಜ್ಯದ ಹುಟ್ಟುವಳಿ; ರಾಜ್ಯಾದಾಯ; (ಸಾರ್ವಜನಿಕ ವೆಚ್ಚಗಳನ್ನು ತೂಗಿಸುವ) ರಾಜ್ಯದ ವಾರ್ಷಿಕ ವರಮಾನ.
  4. ರೆವೆನ್ಯೂ ಇಲಾಖೆ; ಕಂದಾಯದ ಇಲಾಖೆ; ರಾಜ್ಯದ ಕಂದಾಯವನ್ನು ವಸೂಲು ಮಾಡುವ ಇಲಾಖೆ.