revelation ರೆವಲೇಷನ್‍
ನಾಮವಾಚಕ
  1. (ದೇವರ ಯಾ ಅಲೌಕಿಕ ಚೇತನವೊಂದರ ಮೂಲಕ ಮನುಷ್ಯನಿಗೆ) ಜ್ಞಾನದ ನೀಡಿಕೆ ಯಾ ಪ್ರಕಟನ; ಜ್ಞಾನಪ್ರಕಾಶನ.
  2. ದಿವ್ಯಜ್ಞಾನ; ಶ್ರುತಿ; ದೇವರಿಂದ ಯಾ ಅಲೌಕಿಕ ಚೇತನದಿಂದ ಮನುಷ್ಯನಿಗೆ ನೀಡಿದ ಯಾ ಪ್ರಕಟಿಸಿದ ಜ್ಞಾನ, ಅರಿವು.
  3. ಅಚ್ಚರಿಯ ಅರಿವು; ಆಶ್ಚರ್ಯದ ಸಂಗತಿ; ಹಿಂದೆ ಗೊತ್ತಿರದಿದ್ದ ಯಾ ಅರಿತಿರದಿದ್ದ ವಿಷಯವನ್ನು ಆಶ್ಚರ್ಯ ಹುಟ್ಟಿಸುವ ರೀತಿಯಲ್ಲಿ ತಿಳಿಸುವುದು, ತೋರಿಸುವುದು: it was a revelation to me ಅದು ನನಗೆ ಅಚ್ಚರಿಯ ವಿಷಯವಾಗಿತ್ತು. what a revelation! ಎಷ್ಟು ಆಶ್ಚರ್ಯದ ಸಂಗತಿ!
  4. (ಹಿಂದೆ ಗುಪ್ತವಾಗಿದ್ದ ಯಾ ಅವಿಸಿದ್ದ ಸಂಗತಿಯನ್ನು) ಹೊರಗೆಡುವುದು; ಬಯಲು ಮಾಡುವುದು; ಬಹಿರಂಗಪಡಿಸುವುದು; ಪ್ರಕಟಣ.
ಪದಗುಚ್ಛ

the Revelation (of St. John the Divine ಯಾ ಆಡುಮಾತುದಲ್ಲಿ Revelations) ಬೈಬಲಿನ ಹೊಸ ಒಡಂಬಡಿಕೆಯ (ಸಂತ ಜಾನನದೆಂದು ಹೇಳಲಾದ) ಕೊನೆಯ ಪ್ರಕರಣ; ಬೈಬಲಿನಲ್ಲಿರುವ ಭವಿಷ್ಯದ್ದರ್ಶನದ ಯಾ ಕಾಲಜ್ಞಾನದ ಪ್ರಕರಣ.