See also 2reveal
1reveal ರಿವೀಲ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ದೇವರ ವಿಷಯದಲ್ಲಿ) ಅಂತಃಪ್ರೇರಣೆಯ ಯಾ ಅಲೌಕಿಕ ಸಾಧನಗಳ ಮೂಲಕ–ತಿಳಿಸು, ಪ್ರಕಾಶಪಡಿಸು.
  2. ಹೊರಗೆಡಹು; ಬಯಲುಮಾಡು; ರಟ್ಟುಮಾಡು; ಪ್ರಕಟಿಸು; ತಿಳಿಯಪಡಿಸು: reveal secret ಗುಟ್ಟನ್ನು ರಟ್ಟುಮಾಡು.
  3. ಬಹಿರಂಗಪಡಿಸು; ಪ್ರದರ್ಶಿಸು; ತೆರೆದು ತೋರು; ತೋರಿಸು; ಕಾಣಿಸುವಂತೆ ಮಾಡು: one day the truth about these events will be revealed ಈ ಘಟನೆಗಳನ್ನು ಕುರಿತ ಸತ್ಯ ಒಂದಾನೊಂದು ದಿನ ಬಹಿರಂಗವಾಗುತ್ತದೆ.
  4. (ಆತ್ಮಾರ್ಥಕ ಯಾ ಕರ್ಮಣಿಯಲ್ಲಿ)
    1. ಜ್ಞಾತವಾಗು; ಗಮನಕ್ಕೆ ಬರು.
    2. ದೃಷ್ಟಿಗೆ ಬೀಳು; ಗೋಚರಿಸು; ಗೋಚರವಾಗು.
ಪದಗುಚ್ಛ

reveal itself

  1. ದೃಷ್ಟಿಗೆ ಬೀಳು; ಗೋಚರವಾಗು; ಕಣ್ಣಿಗೆ ಕಾಣು.
  2. ಅರಿವಿಗೆ ಬರು; ಜ್ಞಾತವಾಗು.
See also 1reveal
2reveal ರಿವೀಲ್‍
ನಾಮವಾಚಕ

ದ್ವಾರದ ಯಾ ಗೂಡಿನ (ಮುಖ್ಯವಾಗಿ ಬಾಗಿಲು ಯಾ ಕಿಟಕಿಗೂಡಿನ) ಒಳ(ಪಕ್ಕದ) ಮೈ.