revamp ರೀವ್ಯಾಂಪ್‍
ಸಕರ್ಮಕ ಕ್ರಿಯಾಪದ
  1. (ಬೂಡ್ಸಿಗೆ) ಹೊಸ–ಮೇಲುಹೊದಿಕೆ ಹೊದಿಸು; ಮೇಲುಮುಚ್ಚಿಕೆ ಜೋಡಿಸು.
  2. ಪುನಃ ತೇಪೆಹಾಕು.
  3. ದುರಸ್ತಿ ಮಾಡು; ರಿಪೇರಿ ಮಾಡು; ಜೀರ್ಣೋದ್ಧಾರ ಮಾಡು.
  4. ಪುನಾರಚಿಸು; ಪರಿಷ್ಕರಿಸು; ನವೀಕರಿಸು; ಹೊಸದಾಗಿ ಮಾಡು; ಹೊಸ ರೂಪ ಕೊಡು: revamp an old comedy ಹಳೆಯ ವೈನೋದಿಕವೊಂದನ್ನು (ಘಟನೆ ಮೊದಲಾದವನ್ನು ಸೇರಿಸಿ) ಹೊಸದಾಗಿ ರಚಿಸು, ಬರೆ. revamp a committee (ಸದಸ್ಯರನ್ನು ಸೇರಿಸಿ ಯಾ ತೆಗೆದುಹಾಕಿ) ಮಂಡಲಿಯನ್ನು ಪುನಾರಚಿಸು, ಹೊಸದಾಗಿ ರಚಿಸು.
  5. ಉತ್ತಮಗೊಳಿಸು; ಅಭಿವೃದ್ಧಿಪಡಿಸು: revamp agriculture in a backward area ಹಿಂದುಳಿದ ಪ್ರದೇಶದಲ್ಲಿ ವ್ಯವಸಾಯವನ್ನು ಉತ್ತಮಗೊಳಿಸು.