revalue ರೀವ್ಯಾಲ್ಯೂ
ಸಕರ್ಮಕ ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ revalues; ಭೂತರೂಪ ಮತ್ತು ಭೂತಕೃದಂತ revalued; ವರ್ತಮಾನ ಕೃದಂತ revaluing).
  1. (ಅರ್ಥಶಾಸ್ತ್ರ) ಪುನರ್ಮೌಲ್ಯೀಕರಿಸು; ಪುನರ್ಮೌಲ್ಯಮಾಪನ ಮಾಡು; ಬೇರೆ ಬೆಲೆ ನಿಗದಿ ಮಾಡು; (ಒಂದು ನಾಣ್ಯ, ನೋಟು ಮೊದಲಾದವಕ್ಕೆ) ಬೇರೆ ನಾಣ್ಯ ಯಾ ನೋಟಿಗೆ ಸಂಬಂಧಿಸಿದಂತೆ, ಬೇರೆ ಮೌಲ್ಯವನ್ನು (ಮುಖ್ಯವಾಗಿ ಹೆಚ್ಚಿನ) ಮೌಲ್ಯವನ್ನು–ಕೊಡು, ನಿರ್ಧರಿಸು.
  2. ಮರುಮೌಲ್ಯಮಾಪನ ಮಾಡು; ಮತ್ತೆ ಯಾ ಹೊಸದಾಗಿ ಬೆಲೆಕಟ್ಟು, ಬೆಲೆ ನಿರ್ಧರಿಸು: have your house revalued at today’s prices ಇಂದಿನ ಬೆಲೆಗಳ ಅನುಸಾರ ನಿನ್ನ ಮನೆಗೆ ಮತ್ತೆ ಬೆಲೆ ಕಟ್ಟಿಸು, ಹೊಸ ಬೆಲೆ ಕಟ್ಟಿಸು.