1retrospective ರೆಟ್ರಸ್ಟೆಕ್ಟಿವ್‍
ಗುಣವಾಚಕ
  1. ಹಿನ್ನೋಟದ; ಗತಕಾಲದ ಕಡೆಗೆ ದೃಷ್ಟಿಯುಳ್ಳ; ಪಶ್ಚಾತ್‍ ದೃಷ್ಟಿಯ.
  2. ಹಿನ್ನೆನಪುಗಳ; ಪೂರ್ವಸ್ಮರಣೆಗಳ.
  3. ಪೂರ್ವ ನಿದರ್ಶನ, ಆಧಾರ, ಪರಿಸ್ಥಿತಿ–ಇವುಗಳಿಗೆ ಅನುಸಾರವಾದ; ಪೂರ್ವಾನುಸಾರಿಯಾದ.
  4. (ಶಾಸನ, ತೀರ್ಪು ಮೊದಲಾದವುಗಳ ವಿಷಯದಲ್ಲಿ) ಪೂರ್ವಾನ್ವಯವುಳ್ಳ; ಪೂರ್ವವ್ಯಾಪ್ತಿಯುಳ್ಳ; ಹಿಂಜಾರಿಯ; ಅದು ಜಾರಿಗೆ ಬಂದುದರ ಹಿಂದಿನ ಕಾಲಕ್ಕೂ ಅನ್ವಯಿಸುವ: a retrospective legislation ಪೂರ್ವಾನ್ವಯವುಳ್ಳ ಶಾಸನ. a retrospective wage-increase ಪೂರ್ವವ್ಯಾಪ್ತಿಯುಳ್ಳ (ಅಂದರೆ ಹಿಂದಿನ ಒಂದು ತಾರೀಖಿನಿಂದ ಜಾರಿಗೆ ಬರುವ) ವೇತನವೃದ್ಧಿ.
  5. (ದೃಶ್ಯದ ವಿಷಯದಲ್ಲಿ) ಹಿಂಭಾಗದಲ್ಲಿರುವ; ಹಿಂದುಗಡೆಯ.
  6. ಸಿಂಹಾವಲೋಕನರೂಪದ; (ಕಲಾಪ್ರದರ್ಶನ, ಸಂಗೀತ ಮೊದಲಾದವುಗಳ ವಿಷಯದಲ್ಲಿ) ಕಲಾವಿದನ ಜೀವಿತಾವಧಿಯಲ್ಲಿನ ಬೆಳವಣಿಗೆಯನ್ನು ತೋರಿಸುವ.
2retrospective ರೆಟ್ರಸ್ಪೆಕ್ಟಿವ್‍
ನಾಮವಾಚಕ

ಸಿಂಹಾವಲೋಕನ ಪ್ರದರ್ಶನ, ಕಚೇರಿ ಮೊದಲಾದವು; ಕಲಾವಿದನ ಜೀವಿತಾವಧಿಯಲ್ಲಿನ ಬೆಳವಣಿಗೆಯನ್ನು, ಸಾಧನೆಯ ಹಂತಗಳನ್ನು ತೋರಿಸುವ ಪ್ರದರ್ಶನ, ಸಂಗೀತ ಕಚೇರಿ ಮೊದಲಾದವು.