See also 2retrieve
1retrieve ರಿಟ್ರೀವ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ವಿಶೇಷ ತಳಿಯ ನಾಯಿಯ ವಿಷಯದಲ್ಲಿ ಕೊಂದ ಯಾ ಗಾಯಪಡಿಸಿದ ಹಕ್ಕಿ ಮೊದಲಾದವನ್ನು) ಹುಡುಕಿ ತೆಗೆದುಕೊಂಡು ಬರು; ಅರಸಿ ತರು; ಪತ್ತೆಹಚ್ಚಿ ತರು ( ಅಕರ್ಮಕ ಕ್ರಿಯಾಪದ ಸಹ).
  2. ಶೋಧನೆಯಿಂದ ಯಾ ಅಧ್ಯಯನದ ಮೂಲಕ ಮತ್ತೆ ಪಡೆ; ಮತ್ತೆ ಅರಿವಿಗೆ ತರು: these discourses retrieve lost pieces of antiquity ಈ ಉಪನ್ಯಾಸಗಳು ಕಳೆದುಹೋದ ಪ್ರಾಚೀನ ಕೃತಿಗಳನ್ನು ಪುನಃ ಸಂಪಾದಿಸುತ್ತವೆ.
  3. ಮತ್ತೆ ನೆನೆಪಿಗೆ ತಂದುಕೊ; ಪುನಃ ಜ್ಞಾಪಿಸಿಕೊ; ತಿರುಗಿ ಸ್ಮರಿಸಿಕೊ; ನೆನಪಿನ ಮೂಲಕ ಮತ್ತೆ ಪಡೆ: it is impossible for the mind to retrieve anything without mutilation of it ವಿಕಾರಗೊಳಿಸದೆ ಯಾವುದನ್ನೇ ನೆನಪಿಗೆ ತಂದುಕೊಳ್ಳಲು ಮನಸ್ಸಿಗೆ ಶಕ್ಯವಿಲ್ಲ.
    1. (ಶೇಖರಿಸಿದ ಸಮಾಚಾರ, ವಿವರಣೆ, ವಿಷಯ ಮೊದಲಾದವನ್ನು) ಮತ್ತೆ ಪಡೆ; ತಿರುಗಿಸಿ ಗಳಿಸು.
    2. (ಕಂಪ್ಯೂಟರ್‍ ಮೊದಲಾದವುಗಳಲ್ಲಿ ಶೇಖರಿಸಿದ ಮಾಹಿತಿಯನ್ನು) ಮತ್ತೆ ಪಡೆ.
  4. ಮತ್ತೆ ಸ್ವಾಧೀನ ಪಡೆ; ಪುನಃ ವಶಪಡಿಸಿಕೊ; ಪುನಃ ಸ್ವಾಮ್ಯ ಗಳಿಸು.
  5. (ದುಃಸ್ಥಿತಿ ಮೊದಲಾದವುಗಳಿಂದ) ರಕ್ಷಿಸು; ಸಲಹು; ಕಾಪಾಡು; ಉದ್ಧರಿಸು.
  6. (ಮುಖ್ಯವಾಗಿ ಆಸ್ತಿ, ಸಂಪತ್ತು, ಗೌರವ ಮೊದಲಾದವುಗಳನ್ನು) ಪುನಃ ಏಳಿಗೆಗೆ ತರು; ಮತ್ತೆ ಉಚ್ಛ್ರಾಯಸ್ಥಿತಿಗೆ ತರು; ಪುನರೂರ್ಜಿತಗೊಳಿಸು; ಮೊದಲಿನ ಸುಸ್ಥಿತಿಗೆ ಮತ್ತೆ ತರು.
  7. (ನಷ್ಟ, ಹಾನಿ, ತಪ್ಪು, ಪರಿಸ್ಥಿತಿ–ಇವನ್ನು) ಸರಿಪಡಿಸು; ನೆಟ್ಟಗೆ ಮಾಡು; ನೇರ್ಪಡಿಸು: managed to retrieve the situation ಪರಿಸ್ಥಿತಿಯನ್ನು ಸರಿಪಡಿಸುವಲ್ಲಿ ಯಶಸ್ವಿಯಾದ.
See also 1retrieve
2retrieve ರಿಟ್ರೀವ್‍
ನಾಮವಾಚಕ
  1. ಮರುಗಳಿಕೆ; ಪುನ್ಸಂಪಾದನೆ; ಪುನಃಪ್ರಾಪ್ತಿ; ತಿರುಗಿ ಪಡೆಯುವುದು.
  2. (ದುಃಸ್ಥಿತಿ ಮೊದಲಾದವುಗಳಿಂದ) ಸಂರಕ್ಷಣೆ; ಕಾಪಾಡುವುದು.
  3. (ಆಸ್ತಿ ಮೊದಲಾದವನ್ನು) ಪುನರೂರ್ಜಿತಗೊಳಿಸುವುದು; ಮತ್ತೆ ಏಳಿಗೆಗೆ ತರುವುದು.
  4. (ನಷ್ಟ ಮೊದಲಾದವುಗಳ) ಸರಿಪಡಿಕೆ; ಪರಿಹಾರ.
  5. ಪುನಃಪ್ರಾಪ್ಯತೆ; ಪುನರ್ಲಭ್ಯತೆ; ಮರುಗಳಿಕೆ ಸಾಧ್ಯತೆ; ಪುನ್ಸಂಪಾದನೆ ಸಂಭವ: beyond (or past) retrieve ಪುನಃಪ್ರಾಪ್ಯವಲ್ಲದ; ಪುನರ್ಲಭ್ಯವಾಗದ; ಮರುಗಳಿಕೆ ಸಾಧ್ಯತೆ ಇಲ್ಲದ, ಮೀರಿದ.