retrench ರಿಟ್ರೆಂಚ್‍
ಸಕರ್ಮಕ ಕ್ರಿಯಾಪದ
  1. (ವೆಚ್ಚಗಳನ್ನು, ವೆಚ್ಚದ ಬಾಬುಗಳನ್ನು) ತಗ್ಗಿಸು; ಕಡಮೆಮಾಡು; ಖೋತಾಮಾಡು; ಮಿತಗೊಳಿಸು.
  2. ತೆಗೆದುಹಾಕು; ಕಳೆದುಹಾಕು; ಕತ್ತರಿಸು: retrench a year from the established period ನಿಗದಿಯಾದ ಅವಧಿಯಿಂದ ಒಂದು ವರ್ಷ ತೆಗೆದುಹಾಕು.
  3. (ಸಾಹಿತ್ಯಕೃತಿಯನ್ನು ಯಾ ಅದರಲ್ಲಿಯ ಭಾಗಗಳನ್ನು) ಅಲ್ಲಲ್ಲೇ ಕತ್ತರಿಸಿಹಾಕು; ಮೊಟಕು ಮಾಡು; ಕಡಮೆಮಾಡು; ಅಡಕಗೊಳಿಸು; ಅಲ್ಲಲ್ಲೇ ತೆಗೆದುಹಾಕಿ ಚಿಕ್ಕದಾಗಿಸು.
  4. (ಕೋಟೆಕೊತ್ತಳಗಳ ವಿಷಯದಲ್ಲಿ, ಸಾಮಾನ್ಯವಾಗಿ ಒಳಕಂದಕ ಮತ್ತು ಗೋಡೆಗಳನ್ನೊಳಗೊಂಡ) ಒಳರಕ್ಷಣೆಯ ಸಾಲನ್ನು ಒದಗಿಸು; ಒಳಕಾಪು ನಿರ್ಮಿಸು.
ಅಕರ್ಮಕ ಕ್ರಿಯಾಪದ

ಖರ್ಚು ಕಡಮೆಮಾಡು; ವೆಚ್ಚ ಇಳಿಸು; ಮಿತವ್ಯಯ ತರು.