retortion ರಿಟಾರ್ಷನ್‍
ನಾಮವಾಚಕ
  1. ತೀಕ್ಷ್ಣಪ್ರತ್ಯುತ್ತರ; ಚುಚ್ಚು ಮಾರ್ನುಡಿ.
  2. ಹಿಂಬಾಗು; ಹಿಂತಿರುವು; ಹಿಂದಕ್ಕೆ–ಬಾಗುವುದು, ತಿರುಗುವುದು; ಮೂಲದ ಕಡೆಗೆ ಹೋಗುವುದು, ಹರಿಯುವುದು.
  3. (ಅಂತರರಾಷ್ಟ್ರೀಯ ನ್ಯಾಯಶಾಸ್ತ್ರ) (ಬೇರೊಂದು ದೇಶದ ಪ್ರಜೆಗಳ ಮೇಲೆ ರಾಜ್ಯವು ತೆಗೆದುಕೊಳ್ಳುವ) ಪ್ರತೀಕಾರ ಕ್ರಮ; ಪ್ರತಿಕ್ರಮ; ತನ್ನ ಪ್ರಜೆಗಳ ವಿಷಯದಲ್ಲಿ ಬೇರೊಂದು ದೇಶವು ಹೇಗೆ ವರ್ತಿಸುತ್ತದೆಯೋ ಅಂತೆಯೇ ಆ ದೇಶದ ಪ್ರಜೆಗಳ ಬಗ್ಗೆ ತಾನೂ ವರ್ತಿಸುವ ರಾಜ್ಯದ ಕ್ರಮ.