See also 2retire
1retire ರಿಟೈಅರ್‍
ಅಕರ್ಮಕ ಕ್ರಿಯಾಪದ
  1. ಹಿಂದಕ್ಕೆ ಹೋಗು; ವಾಪಸಾಗು; ಬಿಟ್ಟುಹೋಗು: he retires to his cabin ಅವನು ತನ್ನ ಕೋಣೆಗೆ ಹಿಂದಿರುಗಿದ.
  2. ಹೊರಟು ಹೋಗು; ನಿರ್ಗಮಿಸು: the ladies retired from the dinner party ಭೋಜನಕೂಟದಿಂದ ಹೆಂಗಸರು ನಿರ್ಗಮಿಸಿದರು.
  3. (ಯುದ್ಧ, ಅಪಾಯ, ಆಸಮರ್ಥನೀಯ ನಿಲುವು ಮೊದಲಾದವುಗಳಿಂದ) ಹಿಂಜರಿ; ಹಿಮ್ಮೆಟ್ಟು; ಹಿಂದೆಗೆ; ವಾಪಸಾಗು: retired in good order (ಒಂದು ಸ್ಥಾನದಿಂದ, ಒಂದು ಸ್ಥಾನಕ್ಕೆ, ಶತ್ರುವಿನ ಎದುರು) ವ್ಯವಸ್ಥಿತವಾಗಿ ಹಿಂದೆಗೆದರು.
  4. ಏಕಾಂತವನ್ನು ಅರಸು; ವಿವಿಕ್ತ ಸ್ಥಳವನ್ನು ಆಶ್ರಯಿಸು; ಮರೆಯ, ರಕ್ಷಣೆಯ ಜಾಗಕ್ಕೆ ಹೋಗು; ಏಕಾಂತದ, ರಕ್ಷಣೆಯ, ವಾಸಮಾಡುವ–ಸ್ಥಳಕ್ಕೆ ಹೋಗು.
  5. ದೂರ ದೂರವಾಗು; ದೂರದೂರಕ್ಕೆ ಹೋಗು; ಹಿಂದಕ್ಕೆ ಸರಿ: the farther we go into the sea and retire from the land ನಾವು ಸಮುದ್ರದ ಮಧ್ಯೆ ಬಹಳದೂರ ಹೋಗಿ ಭೂಮಿಯಿಂದ ದೂರವಾದಷ್ಟೂ. as science advances supserstition retires ವಿಜ್ಞಾನವು ಮುನ್ನಡೆದಂತೆ ಮೂಢನಂಬಿಕೆ ಹಿಂದಕ್ಕೆ ಸರಿಯುತ್ತದೆ.
  6. ಮಲಗಲು, ನಿದ್ದೆಮಾಡಲು–ಹೋಗು.
  7. ವಿಶ್ರಮಿಸಲು, ವಿಶ್ರಾಂತಿ ತೆಗೆದುಕೊಳ್ಳಲು–ಹೋಗು.
  8. ಅದೃಶ್ಯವಾಗು: we saw the sun retire ಸೂರ್ಯ ಅದೃಶ್ಯನಾದುದನ್ನು ಕಂಡೆವು.
  9. (ಅಧಿಕಾರ, ಉದ್ೋಗ, ಕೆಲಸ ಮೊದಲಾದವುಗಳಿಂದ, ಒಂದು ನಿರ್ದಿಷ್ಟ ವಯಸ್ಸು ತಲುಪಿದ್ದರಿಂದ ಮೊದಲಾದವುಗಳಿಂದಾಗಿ) ನಿವೃತ್ತನಾಗು; ನಿವೃತ್ತಿಹೊಂದು; ವಿಶ್ರಮಿಸು; ವಿರಾಮ, ವಿಶ್ರಾಂತಿ–ಪಡೆ: retired from the army ಸೇನಾಸೇವೆಯಿಂದ ನಿವೃತ್ತನಾದ. retire on a pension ವಿಶ್ರಾಂತಿ ವೇತನ ಪಡೆದು ನಿವೃತ್ತನಾಗು.
  10. (ಅಧಿಕಾರ, ಉದ್ಯೋಗ ಮೊದಲಾದವನ್ನು) ತ್ಯಜಿಸು; ಬಿಡು; ತೊರೆ: retire from business ವ್ಯಾಪಾರವನ್ನು ತ್ಯಜಿಸು.
  11. (ಕ್ರಿಕೆಟ್‍)
    1. ವಿರಮಿಸು; ನಿವೃತ್ತನಾಗು; ತಾನಾಗಿ ಆಟವನ್ನು ಮುಕ್ತಾಯಮಾಡು, ನಿಲ್ಲಿಸು, ಕೊನೆಗೊಳಿಸು, ತ್ಯಜಿಸು: batsman retired hurt ಪೆಟ್ಟುಬಿದ್ದು ಬ್ಯಾಟುಗಾರ ಆಟದಿಂದ ನಿವೃತ್ತನಾದ.
    2. (ಬ್ಯಾಟುಗಾರನ ವಿಷಯದಲ್ಲಿ) ತನ್ನ ಸರದಿಯ ಆಟವನ್ನು ನಿಲ್ಲಿಸುವಂತಾಗು ( ಸಕರ್ಮಕ ಕ್ರಿಯಾಪದ ಸಹ).
ಸಕರ್ಮಕ ಕ್ರಿಯಾಪದ
  1. (ಒಬ್ಬ ವ್ಯಕ್ತಿಯನ್ನು) ನಿವೃತ್ತಿ ಮಾಡು.
  2. ಸೇನಾತುಕಡಿಗಳನ್ನು ಹಿಂತೆಗೆದುಕೊ.
  3. (ಅರ್ಥಶಾಸ್ತ್ರ) (ನೋಟು ಯಾ ನಾಣ್ಯವನ್ನು) ಚಲಾವಣೆಯಿಂದ ಹಿಂತೆಗೆದುಕೊ.
ಪದಗುಚ್ಛ
  1. retire from the world ವಿರಕ್ತನಾಗು; ಸಂನ್ಯಾಸಿಯಾಗು; ಸಂಸಾರವನ್ನು ತ್ಯಜಿಸು; ಏಕಾಂತವಾಸಿಯಾಗು.
  2. retire into oneself
    1. ಮೌನವಾಗಿರು; ತನ್ನಷ್ಟಕ್ಕೆ ತಾನಿರು.
    2. ನಿಸ್ಸಂಗಿಯಾಗಿರು; ಏಕಾಂತವಾಸಿಯಾಗು; ಜನಗಳೊಡನೆ ಬೆರೆಯದಿರು.
  3. retire to bed ಮಲಗಲು, ನಿದ್ದೆಮಾಡಲು–ಹೋಗು.
See also 1retire
2retire ರಿಟೈಅರ್‍
ನಾಮವಾಚಕ

(ಸೈನ್ಯ) ನಿವೃತ್ತಿ ಸೂಚನೆ; (ಪಡೆಗಳಿಗೆ) ಹಿಮ್ಮೆಟ್ಟಬೇಕೆಂಬ ಸಂಕೇತ: sound the retire ನಿವೃತ್ತಿಸೂಚನೆ ಊದು ಯಾ ಧ್ವನಿಮಾಡು.