reticence ರೆಟಿಸನ್ಸ್‍
ನಾಮವಾಚಕ
  1. ವಾಕ್‍ಸಂಯಮ; ಮಾತಿನಲ್ಲಿ ಹಿಡಿತ, ಸಂಕೋಚ; ತನಗೆ ತಿಳಿದಿರುವುದನ್ನೆಲ್ಲ, ತನಗೆ ಅನಿಸಿದ್ದನ್ನೆಲ್ಲ ಯಾ ಆವಶ್ಯಕವಾಗಿರುವುದಕ್ಕಿಂತ ಹೆಚ್ಚಿನದನ್ನು–ಹೇಳದಿರುವುದು, ಆಡದಿರುವುದು.
  2. (ಕಲೆಯಲ್ಲಿ) ಹಿಡಿತ; ಸಂಯಮ; ಮಿತವಾಗಿರುವುದು; ಅತಿ ಮಾಡದಿರುವುದು; ಅತಿಗೆ ಹೋಗದಿರುವುದು.
  3. (ವಿಷಯವನ್ನು, ಸಂಗತಿಯನ್ನು) ಹೇಳದೆ ಇಟ್ಟಿರುವುದು; ಪ್ರಕಟಗೊಳಿಸದಿರುವುದು; ಹಿಡಿದಿಡುವುದು.
  4. ಮೌನ ಪ್ರವೃತ್ತಿ; ಮಿತಭಾಷಿತ್ವ.