retaliate ರಿಟ್ಯಾಲಿಏಟ್‍
ಸಕರ್ಮಕ ಕ್ರಿಯಾಪದ
  1. (ಕೇಡು, ಹಾನಿ, ಅಪಮಾನ ಮೊದಲಾದವಕ್ಕೆ ಆ ರೂಪದಲ್ಲಿಯೇ) ಪ್ರತೀಕಾರಮಾಡು; ಮುಯ್ಯಿ, ಸೇಡು–ತೀರಿಸು.
  2. (ಆಪಾದಕನ ಮೇಲೆ) ಪ್ರತ್ಯಾಪಾದನೆ ಹೊರಿಸು.
ಅಕರ್ಮಕ ಕ್ರಿಯಾಪದ
  1. (ತನಗೆ ಮಾಡಿದ್ದಕ್ಕೆ ಸರಿಯಾಗಿ) ಪ್ರತಿಮಾಡು; (ಮುಖ್ಯವಾಗಿ) ಮುಯ್ಯಿಗೆ ಮುಯ್ಯಿ ತೀರಿಸು; ಸೇಡು, ಮತ್ಸರ–ತೀರಿಸು.
  2. (ಅರ್ಥಶಾಸ್ತ್ರ) ಪ್ರತೀಕಾರದ (ಆಮದು) ಸುಂಕಹಾಕು; ಮುಯ್ಯಿಸುಂಕ ಹಾಕು; ತಮ್ಮ ದೇಶದ ಸಾಮಾನುಗಳ ಮೇಲೆ ಪರದೇಶದವರು ಹಾಕುವ ಸುಂಕಕ್ಕೆ ಪ್ರತೀಕಾರವಾಗಿ ಆ ದೇಶಗಳ ಸಾಮಾನುಗಳಿಗೆ ಆಮದು ಸುಂಕ ಹಾಕು.