retainer ರಿಟೇನರ್‍
ನಾಮವಾಚಕ
  1. ಧಾರಕ; ಹಿಡಿದಿಡುವ ವ್ಯಕ್ತಿ, ವಸ್ತು ಯಾ ಸಾಧನ.
  2. ನಿಯೋಜನೆ; ಯಾವುದಾದರೂ ಸ್ಥಾನದಲ್ಲಿದ್ದು ಸೇವೆ ಸಲ್ಲಿಸಲು ಇರಿಸಿಕೊಂಡಿರುವುದು, ನಿಯುಕ್ತವಾಗಿರುವುದು.
  3. (ವಕೀಲನಿಗೆ ಕೊಡುವ) ಪೂರ್ವನೇಮಕದ ಹಣ; ಮುಂಗೊತ್ತಿನ ತೆರ.
  4. (ಚರಿತ್ರೆ) (ಶ್ರೀಮಂತನ ಯಾ ದೊಡ್ಡಪದವಿಯವನ) ಆಳು; ಆಶ್ರಿತ; ಅನುಚರ; ಸೇವಕ; ಭೃತ್ಯ.
  5. (ದಂತವೈದ್ಯ) ಬಂಧನಿ; ಹಲ್ಲುಗಳನ್ನು ಅವುಗಳ ಜಾಗದಲ್ಲಿ ಹಿಡಿದಿಡುವ ಸಲಕರಣೆ.
  6. (ಬ್ರಿಟಿಷ್‍ ಪ್ರಯೋಗ) ಇಳಿಸಿದ ಬಾಡಿಗೆ; ವಾಸಮಾಡದೆ ಇರುವ ಅವಧಿಯಲ್ಲಿ, ವಸತಿಯನ್ನು ಉಳಿಸಿಕೊಳ್ಳಲು ಕೊಡುವ ಇಳಿಸಿದ ದರದ ಬಾಡಿಗೆ.
  7. (ಹಾಸ್ಯ ಪ್ರಯೋಗ) ನಂಬಿಕೆಯ ಮುದಿ ಸ್ನೇಹಿತ ಯಾ ಆಳು; ನಿಷ್ಠಾವಂತ ವೃದ್ಧ ಸೇವಕ ಯಾ ಮಿತ್ರ.
ಪದಗುಚ್ಛ

old retainer = retainer\((7)\).