retain ರಿಟೇನ್‍
ಸಕರ್ಮಕ ಕ್ರಿಯಾಪದ
  1. ಅದರ ಸ್ಥಾನದಲ್ಲಿ, ಸ್ಥಳದಲ್ಲಿ, ಜಾಗದಲ್ಲಿ–ಇಟ್ಟಿರು, ಇಡು.
  2. ಭದ್ರವಾಗಿ–ಹಿಡಿದಿಡು, ಹಿಡಿದುಕೊ, ಧರಿಸಿರು.
  3. (ಮುಖ್ಯವಾಗಿ ವಕೀಲನನ್ನು ಮೊದಲೇ ಹಣಕೊಟ್ಟು) ಮುಂಗೊತ್ತು ಮಾಡಿಕೊಂಡಿರು; ಪೂರ್ವನೇಮಕಮಾಡಿಕೊ: retain a lawyer ವಕೀಲನನ್ನು ಮುಂಗೊತ್ತು ಮಾಡಿಕೊ.
  4. (ಸ್ವಾಧೀನದಲ್ಲಿ, ವಶದಲ್ಲಿ, ಆಚರಣೆಯಲ್ಲಿ) ಇಟ್ಟುಕೊಂಡಿರು.
  5. ಉಳಿಸಿಕೊಂಡಿರು; ರದ್ದುಗೊಳಿಸದೆ, ತ್ಯಜಿಸದೆ, ಬದಲಾಯಿಸದೆ–ಇಟ್ಟಿರು: he is 90, but still retains the use of all his faculties ಅವನಿಗೆ 90 ವರ್ಷ, ಆದರೂ ಎಲ್ಲ ಶಕ್ತಿಗಳನ್ನೂ ಉಳಿಸಿಕೊಂಡಿದ್ದಾನೆ.
  6. ಜ್ಞಾಪಕದಲ್ಲಿ, ಮನಸ್ಸಿನಲ್ಲಿ, ನೆನಪಿನಲ್ಲಿ–ಇಟ್ಟಿರು; ಮರೆಯದಿರು: she retains a clear memory of her schooldays ಅವಳು ತನ್ನ ಶಾಲೆಯ ದಿನಗಳ ಸ್ಪಷ್ಟ ನೆನಪನ್ನು ಇಟ್ಟುಕೊಂಡಿದ್ದಾಳೆ.