resuscitate ರಿಸಸಿಟೇಟ್‍
ಸಕರ್ಮಕ ಕ್ರಿಯಾಪದ

  1. ಮತ್ತೆ ಬದುಕಿಸು: they resuscitated the drowned person by artificial respiration ಕೃತಕ ವಿಧಾನದಿಂದ ಉಸಿರುಗೂಡಿಸಿ ಮುಳುಗಿದ್ದವನನ್ನು ಮತ್ತೆ ಬದುಕಿಸಿದರು.
  2. ಮತ್ತೆ ಪ್ರಜ್ಞೆಗೆ ತರು: they resuscitated him to consciousness ಅವನನ್ನು ಅವರು ಮತ್ತೆ ಪ್ರಜ್ಞೆಗೆ ತಂದರು.
  3. (ವಾಡಿಕೆ ತಪ್ಪಿಹೋಗಿದ್ದನ್ನು) ಮತ್ತೆ ಬಳಕೆಗೆ, ಚಾಲ್ತಿಗೆ, ಪುನರಾಚರಣೆಗೆ–ತರು: they resuscitated the ancient custom (ವಾಡಿಕೆ ತಪ್ಪಿಹೋಗಿದ್ದ) ಆ ಪುರಾತನ ಪದ್ಧತಿಯನ್ನು ಅವರು ಮತ್ತೆ ಬಳಕೆಗೆ ತಂದರು.
  4. (ಶಿಥಿಲಗೊಂಡಿರುವ ಮಂದಿರ ಮೊದಲಾದವುಗಳನ್ನು) ಜೀರ್ಣೋದ್ಧಾರ ಮಾಡು.
  5. (ಮಲಿನವಾಗಿರುವ ಚಿತ್ರ ಮೊದಲಾದವನ್ನು) ಹೊಸದಾಗಿಸು; ನವೀಕರಿಸು; ಮತ್ತೆ ಉಜ್ವಲಗೊಳಿಸು.
ಅಕರ್ಮಕ ಕ್ರಿಯಾಪದ
  1. ಮತ್ತೆ ಬದುಕಿಕೊ: the drowned person got resuscitated ಮುಳುಗಿದ್ದವನು ಮತ್ತೆ ಬದುಕಿಕೊಂಡ.
  2. ಮತ್ತೆ ಪ್ರಜ್ಞೆ ಪಡೆ: he got resuscitated to consciousness ಅವನು ಮತ್ತೆ ಪ್ರಜ್ಞೆಗೊಂಡ, ಪ್ರಜ್ಞೆಪಡೆದ; ಅವನಿಗೆ ಮತ್ತೆ ಪ್ರಜ್ಞೆ ಬಂತು.
  3. ಮತ್ತೆ ರೂಢಿಗೆ, ಚಾಲ್ತಿಗೆ–ಬರು: the ancient custom got resuscitated ಆ ಪ್ರಾಚೀನ ಪದ್ಧತಿಯು ಮತ್ತೆ ಚಾಲ್ತಿಗೆ ಬಂತು.