resurrection ರೆಸರೆಕ್‍ಷನ್‍
ನಾಮವಾಚಕ
  1. (Resurrection)
    1. (ಸಮಾಧಿಯಿಂದ) ಯೇಸುಕ್ರಿಸ್ತನ ಪುನರುತ್ಥಾನ.
    2. ಯೇಸುಕ್ರಿಸ್ತನ ಪುನರುತ್ಥಾನದ ಹಬ್ಬ, ಉತ್ಸವ; ಪುನರುತ್ಥಾನದ ವಾರ್ಷಿಕಸ್ಮಾರಕ.
  2. (Resurrection) (ಕ್ರೈಸ್ತ, ಇಸ್ಲಾಮ್‍, ಯೆಹೂದ್ಯ ಧರ್ಮಗಳ ವಿಷಯದಲ್ಲಿ) (ಅಂತಿಮ ದಿನದಂದು, ಎಂದರೆ ಪ್ರಳಯಕಾಲದಲ್ಲಿ ಸಕಲ ಆತ್ಮಗಳ ವಿಚಾರಣೆಯನ್ನು ಭಗವಂತನು ನಡೆಸುವ ದಿನದಂದು) ಎಲ್ಲ ಮಾನವರ ಆತ್ಮಗಳೂ ಸಮಾಧಿಯಿಂದ ಎದ್ದು ಬರುವುದು; ಸಕಲಾತ್ಮರ, ಸಕಲ ಜೀವರ ಪುನರುತ್ಥಾನ.
  3. (ಸಮಾಧಿಯನ್ನಗೆದು) ಕಳೇಬರವನ್ನು ಹೊರತೆಗೆಯುವುದು; ಶವೋತ್ಖನನ (ರೂಪಕವಾಗಿ ಸಹ).
  4. (ಚಾಲ್ತಿ ತಪ್ಪಿರುವ ವಾಡಿಕೆ ಮೊದಲಾದವನ್ನು ಯಾ ಮರೆತುಹೋಗಿರುವ ನೆನಪನ್ನು) ಜಾಗೃತಗೊಳಿಸುವುದು; ಎಚ್ಚರಗೊಳಿಸುವುದು; ಪುನರುಜ್ಜೀವನಗೊಳಿಸುವುದು; ಸಕ್ರಿಯಗೊಳಿಸುವುದು.
ಪದಗುಚ್ಛ

resurrection plant ಸೆಲಜಿನೆಲ ಕುಲದ ಗೊಂಡೆಪಾಚಿ(clubmoss)ಗಳೂ ಸೇರಿದಂತೆ, ಒಣಗಿಸಿದ ಮೇಲೆ ಒದ್ದೆ ಮಾಡಿದಾಗ ಬಿಚ್ಚಿಕೊಳ್ಳುವ ಒಂದು ಬಗೆಯ ಗಿಡ.