resumption ರಿಸಂಪ್ಷನ್‍
ನಾಮವಾಚಕ
  1. ವಶ ತಪ್ಪಿದ್ದನ್ನು ಪುನಃ ವಶಪಡಿಸಿಕೊಳ್ಳುವಿಕೆ; ಕಳೆದುಕೊಂಡಿದ್ದುದನ್ನು ಮತ್ತೆ ಪಡೆದುಕೊಳ್ಳುವಿಕೆ; ಪುನರ್ವಶ; ಪುನಃಸ್ವಾಧೀನ; ಪುನರ್ಲಾಭ; ಪುನಃಪ್ರಾಪ್ತಿ: resumption of one’s lost territory (ಕಳೆದುಕೊಂಡಿದ್ದ) ಪ್ರದೇಶವನ್ನು ಪುನಃ ವಶಪಡಿಸಿಕೊಳ್ಳುವುದು; (ಅದರ) ಮರುಗಳಿಕೆ; ಪುನಃಸ್ವಾಧೀನ; ಪುನಃಪ್ರಾಪ್ತಿ.
  2. (ಕೊಟ್ಟುಬಿಟ್ಟದ್ದನ್ನು) ಹಿಂತೆಗೆದುಕೊಳ್ಳುವುದು: resumption of the grant previously made ಹಿಂದೆ ಮಾಡಿದ್ದ ಅನುದಾನವನ್ನು ಹಿಂತೆಗೆದುಕೊಳ್ಳುವುದು.
  3. (ಬಿಟ್ಟಲ್ಲಿಂದ, ಭಾಷಣ ಮೊದಲಾದವನ್ನು ಯಾ ಕೆಲಸವನ್ನು) ಪುನಃ ಆರಂಭಿಸುವಿಕೆ; ಅವುಗಳ ಪುನರಾರಂಭ: resumption of the building activities ಕಟ್ಟಡ ಕೆಲಸಗಳನ್ನು ಪುನಃ ಆರಂಭಿಸುವುದು. resumption of the conversation (ನಿಂತಿದ್ದ) ಸಂಭಾಷಣೆಯ ಪುನರಾರಂಭ.