restraint ರಿಸ್ಟ್ರೇಂಟ್‍
ನಾಮವಾಚಕ
  1. ತಡೆತ; ನಿರೋಧ; ತಡೆಯುವುದು ಯಾ ತಡೆಗೊಳಪಟ್ಟಿರುವುದು; ಪ್ರತಿಬಂಧಕ; ನಿರ್ಬಂಧ; ಅಡ್ಡಿ; ಅಂಕೆ: freedom from restraint ಅಂಕೆಯಿಂದ ಬಿಡುಗಡೆ; ಪ್ರತಿಬಂಧಕವಿಲ್ಲದ ಸ್ವಾತಂತ್ರ್ಯ.
  2. ಪ್ರತಿಬಂಧಕ ಶಕ್ತಿ, ಅಧಿಕಾರ ಯಾ ಪ್ರಭಾವ.
  3. (ಮುಖ್ಯವಾಗಿ ಹುಚ್ಚರ ರಕ್ಷಣಾಲಯ ಮೊದಲಾದವುಗಳ ವಿಷಯದಲ್ಲಿ) ನಿರ್ಬಂಧ; ನಿಯಂತ್ರಣ; (ಓಡಾಡಲು ಬಿಡದೆ) ಕೂಡಿಟ್ಟಿರುವುದು: the lunatic is under restraint ಈ ಹುಚ್ಚ ನಿರ್ಬಂಧದಲ್ಲಿದ್ದಾನೆ.
  4. ತಡೆ; ಅಡ್ಡಿ; ಆತಂಕ; ನಿರ್ಬಂಧ: without restraint ತಡೆಯಿಲ್ಲದೆ; ನಿರಾತಂಕವಾಗಿ.
    1. (ನಡೆನುಡಿಯಲ್ಲಿ) ಬಿಗಿ; ಹಿಡಿತ; ಸಂಯಮ.
    2. ಆತ್ಮಸಂಯಮ(ನ); ಅತಿಯನ್ನು ಮಾಡದಿರುವುದು.
  5. (ಸಾಹಿತ್ಯ ಮೊದಲಾದವುಗಳಲ್ಲಿ) ಸಂಯಮ; ಅತಿರೇಕಕ್ಕೆ ಹೋಗದೆ ಭಾವ, ಅಲಂಕಾರ, ವರ್ಣ ಮೊದಲಾದವುಗಳಲ್ಲಿ ಮಿತಿಯಿರುವುದು.
  6. ಬಿಂಕ; ಬಿಗುಮಾನ; ಶ್ರೀಮದ್ಗಾಂಭೀರ್ಯ.
  7. ನಿಯಂತ್ರಕ; ತಡೆಯಲ್ಲಿ, ನಿರ್ಬಂಧದಲ್ಲಿ ಇಡುವಂಥದು.
ಪದಗುಚ್ಛ
  1. in restraint of ತಡೆಯಲು; ಪ್ರತಿಬಂಧಿಸಲು.
  2. restraint of trade ವಾಣಿಜ್ಯ ಪ್ರತಿಬಂಧನ; ಮುಕ್ತ ಮಾರುಕಟ್ಟೆ ಪರಿಸ್ಥಿತಿಗಳಲ್ಲಿ ಮಧ್ಯ ಪ್ರವೇಶಿಸುವ ಕ್ರಮ.