restrain ರಿಸ್ಟ್ರೇನ್‍
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿಯನ್ನು ಯಾವುದೇ ಕಾರ್ಯ ಮೊದಲಾದವುಗಳಿಂದ) ತಡೆ; ನಿರೋಧಿಸು: restrain a person from suicide ವ್ಯಕ್ತಿಯನ್ನು ಆತ್ಮಹತ್ಯೆಯಿಂದ ತಡೆ.
  2. (ಆತ್ಮಾರ್ಥಕ) ತಡೆದುಕೊ; ಅಂಕೆಯಲ್ಲಿಟ್ಟುಕೊ; ಹದ್ದಿನಲ್ಲಿ ಇಡು, ಇಟ್ಟುಕೊ; ನಿಗ್ರಹಿಸು; ದಮನಮಾಡು; ಸಂಯಮದಲ್ಲಿಡು: restrain your temper ಕೋಪವನ್ನು ತಡೆದುಕೊ, ಹದ್ದಿನಲ್ಲಿಡು, ನಿಗ್ರಹಿಸು.
  3. (ಮಿತಿಮೀರದಂತೆ) ತಡೆ; ತಡೆದಿಡು; ಹತೋಟಿಯಲ್ಲಿಡು; ಅಂಕೆಯಲ್ಲಿಡು; ಹದ್ದಿನಲ್ಲಿಡು; ನಿರ್ಬಂಧಿಸು: restrain excessive profits ಲಾಭಗಾರಿಕೆಯನ್ನು ತಡೆ, ಹದ್ದಿನಲ್ಲಿಡು.
  4. ಸೆರೆಹಿಡಿ ಯಾ ಸೆರೆಯಲ್ಲಿಡು; ಬಂಧಿಸು ಯಾ ಬಂಧನದಲ್ಲಿಡು.