restorer ರಿಸ್ಟೋರರ್‍
ನಾಮವಾಚಕ
  1. ಪುನಃಸ್ಥಾಪಕ; (ಬಳಕೆ ತಪ್ಪಿದ ಪದ್ಧತಿ ಮೊದಲಾದವನ್ನು) ಮತ್ತೆ ರೂಢಿಗೆ ತರುವವನು.
  2. (ಭಗ್ನಾವಶೇಷವಾದ ಶಿಲ್ಪ, ಶಿಥಿಲವಾಗಿ ಹೋಗಿರುವ ಮಂದಿರ, ಅಳಿಸಿ ಹೋಗಿರುವ ಚಿತ್ರ ಮೊದಲಾದವುಗಳ) ಜೀರ್ಣೋದ್ಧಾರಕ; ನವೀಕರಣಕಾರ.
  3. (ಪ್ರಭುತ್ವ, ಅಧಿಕಾರ ಮೊದಲಾದವುಗಳಲ್ಲಿ) ಪುನಃಪ್ರತಿಷ್ಠಾಪಕ.
  4. (ಪತಿತರ) ಪುನರುದ್ಧಾರಕ.
  5. (ಗ್ರಂಥ ಮೊದಲಾದವುಗಳ ಲುಪ್ತಭಾಗಗಳನ್ನು ತುಂಬಿ ಸರಿಪಡಿಸುವ) ಪರಿಷ್ಕರಣಕಾರ.