restore ರಿಸ್ಟೋರ್‍
ಸಕರ್ಮಕ ಕ್ರಿಯಾಪದ
  1. (ನಿಜವಾದ ಮಾಲಿಕನಿಗೆ ಅವನ) ಕೈತಪ್ಪಿದ ವಸ್ತುವನ್ನು ಹಿಂದಿರುಗಿಸು; ಪುನರ್ವಶಮಾಡು; ಪುನಃ ಸ್ವಾಧೀನಗೊಳಿಸು.
  2. (ಅನ್ಯಾಯಕ್ಕೆ ಗುರಿಯಾಗಿರುವವನಿಗೆ) ಪರಿಹಾರವನ್ನು ಒದಗಿಸಿಕೊಡು, ದೊರಕಿಸಿಕೊಡು.
  3. ಜೀರ್ಣೋದ್ಧಾರ ಮಾಡು; (ಶಿಥಿಲವಾದ ದೇವಮಂದಿರ ಮೊದಲಾದವನ್ನು, ರಿಪೇರಿ ಮೊದಲಾದವನ್ನು ಮಾಡಿ) ಮತ್ತೆ ಪೂರ್ವಸ್ಥಿತಿಗೆ ತರು.
  4. (ಮಲಿನವಾಗಿರುವ) ಚಿತ್ರವನ್ನು ನವೀಕರಿಸು; ಮೊದಲಿದ್ದಂತೆ ಹೊಸದಾಗಿ ಮಾಡು.
  5. (ಪ್ರಾಚೀನ ಗ್ರಂಥದಲ್ಲಿ ಅಳಿಸಿಹೋಗಿರುವ ಶಬ್ದಗಳನ್ನು ಊಹೆಯಿಂದ ನಿರ್ಣಯಿಸಿ ತಕ್ಕ ಸ್ಥಳಗಳಲ್ಲಿ ಸೇರಿಸುವುದರ ಮೂಲಕ) ಪರಿಷ್ಕರಿಸು.
  6. (ಯಾವುದೇ ವಸ್ತುವನ್ನು) ಪೂರ್ವಸ್ಥಿತಿಗೆ ತರು.
  7. (ನಾಮಾವಶೇಷವಾಗಿ ಹೋಗಿರುವ ಪುರಾತನ ಪ್ರಾಣಿ, ಭಗ್ನಾವಶೇಷವಾಗಿರುವ ಪ್ರಾಚೀನ ಕಟ್ಟಡ, ನಗರ ಮೊದಲಾದವುಗಳ ಮೂಲಸ್ವರೂಪವನ್ನು ಊಹಿಸಿ ಆ) ಮೂಲರೂಪಕ್ಕೆ ತರು; ಪುನಾರೂಪಿಸು.
  8. (ಹಿಂದಿದ್ದ ಸ್ಥಾನಮಾನ, ಪದವಿ, ಘನತೆ ಮೊದಲಾದವುಗಳಲ್ಲಿ ವ್ಯಕ್ತಿಯನ್ನು) ಪುನಃ ಸ್ಥಾಪಿಸು.
  9. (ರೋಗ, ಬಲಹೀನತೆ ಮೊದಲಾದವನ್ನು ನಿವಾರಿಸಿ) ಪುನರಾರೋಗ್ಯ ಉಂಟುಮಾಡು; ಮತ್ತೆಸ್ವಸ್ಥತೆಯನ್ನು ತರು.
  10. (ಗ್ರಂಥ, ಶಾಸನ ಮೊದಲಾದವುಗಳಲ್ಲಿ ಅಳಿಸಿಹೋಗಿರುವ ಶಬ್ದಗಳು, ನಷ್ಟಕುಲವಾಗಿರುವ ಪುರಾತನ ಪ್ರಾಣಿಯ ದೇಹಾವಶೇಷದಲ್ಲಿ ಹೋಗಿಬಿಟ್ಟಿರುವ ಅವಯವಗಳು ಮೊದಲಾದವನ್ನು ಊಹಿಸಿ) ಲುಪ್ತಭಾಗಗಳನ್ನು ತಕ್ಕ ಸ್ಥಳಗಳಲ್ಲಿ ಸೇರಿಸು.
  11. (ಚಾಲ್ತಿ ತಪ್ಪಿರುವ ರೂಢಿ ಮೊದಲಾದವನ್ನು) ಮತ್ತೆ ಚಾಲ್ತಿಗೆ ತರು; ಪುನಃ ಸ್ಥಾಪಿಸು.
  12. (ಮತ್ತೆ ನಿರ್ಮಿಸುವುದು, ಮತ್ತೆ ಬಣ್ಣ ಬಳಿಯುವುದು ಮೊದಲಾದವುಗಳಿಂದ ಯಾವುದನ್ನೇ ಅದರ) ಪೂರ್ವಸ್ಥಿತಿಗೆ ತರು ಯಾ ತರಲು ಪ್ರಯತ್ನಿಸು.
  13. (ಯಾವುದನ್ನೇ ಅದು) ಹಿಂದಿದ್ದ ಜಾಗದಲ್ಲೇ ಇಡು, ಇರಿಸು; ಪೂರ್ವಸ್ಥಾನದಲ್ಲಿಡು.