restoration ರೆಸ್ಟರೇಷನ್‍
ನಾಮವಾಚಕ
  1. (ನಿಜವಾದ ಮಾಲಿಕನಿಗೆ) ಪುನರ್ವಶ; ಪುನಸ್ಸ್ವಾಧೀನ; ಕೈತಪ್ಪಿಹೋದ ವಸ್ತುವನ್ನು ಪುನಃ ದೊರಕಿಸಿಕೊಡುವುದು.
  2. (ಕಷ್ಟ, ನಷ್ಟ ಯಾ ಅನುಭವಿಸಿರುವ ಅನ್ಯಾಯಕ್ಕಾಗಿ ನೀಡುವ) ಪರಿಹಾರ; ನಷ್ಟಭರ್ತಿ.
  3. (ಚರ್ಚು ಮೊದಲಾದ ಮಂದಿರಗಳ) ಜೀರ್ಣೋದ್ಧಾರ.
  4. (ಚಿತ್ರ ಮೊದಲಾದವುಗಳ) ನವೀಕರಣ.
  5. (ಗ್ರಂಥ ಮೊದಲಾದವುಗಳ) ಪರಿಷ್ಕರಣ.
  6. (ಸಂತತಿಯೇ ಇಲ್ಲದೆ ನಷ್ಟವಾಗಿ ಹೋಗಿರುವ ಪ್ರಾಣಿಜಾತಿ, ಭಗ್ನಾವಶೇಷವಾಗಿರುವ ಕಟ್ಟಡ, ನಗರ ಮೊದಲಾದವುಗಳ ಮೂಲರೂಪವನ್ನು ಊಹಿಸಿ ಮಾಡುವ) ಪುನಾರೂಪಣ.
  7. (ಹಿಂದಿನ ಪದವಿ, ಅಧಿಕಾರ, ಘನತೆ ಮೊದಲಾದವುಗಳಲ್ಲಿ, ವ್ಯಕ್ತಿಯ) ಪುನಃಸ್ಥಾಪನೆ.
  8. (ರೋಗ, ದೌರ್ಬಲ್ಯ ಮೊದಲಾದವನ್ನು ನಿವಾರಿಸಿ, ವ್ಯಕ್ತಿಗೆ) ಸ್ವಾಸ್ಥ್ಯವನ್ನು ಮತ್ತೆ ತಂದುಕೊಡುವುದು.
  9. (ಚಾಲ್ತಿ ತಪ್ಪಿರುವ ಯಾವುದನ್ನೇ) ಮತ್ತೆ ಚಾಲ್ತಿಗೆ ತರುವುದು.
    1. (ಪ್ರಾಚೀನ ಗ್ರಂಥದಲ್ಲಿ ಲುಪ್ತವಾಗಿರುವ ಪದಗಳು, ಹಾಳುಬಿದ್ದ ಕಟ್ಟಡ, ಅಳಿಸಿಹೋದ ಚಿತ್ರ, ವಂಶನಷ್ಟವಾಗಿರುವ ಪ್ರಾಣಿಯ ಅವಯವ ಮೊದಲಾದವುಗಳ ಮೂಲರೂಪವನ್ನು ಊಹಿಸಿ ಅವನ್ನು ಆಯಾ ಸ್ಥಾನದಲ್ಲಿ) ಪುನಃ ಸೇರಿಸುವುದು ಯಾ ಸೇರಿಸಿದ್ದು.
    2. (ಹಾಗೆ ಮಾಡಿ ತಯಾರಿಸಿದ) ಚಿತ್ರ ಯಾ ಮಾದರಿ.
  10. (ಯಾವುದನ್ನೇ ಹಿಂದಿನ ಸ್ಥಾನ ಯಾ ಸ್ಥಿತಿಯಲ್ಲಿ) ಮತ್ತೆ ಇರಿಸುವುದು; ಪುನಃಸ್ಥಾಪನೆ.
  11. the Restoration (ಇಂಗ್ಲೆಂಡಿನ ಚರಿತ್ರೆ)
    1. 1660 ರಲ್ಲಿ ನಡೆದ ರಾಜಪ್ರಭುತ್ವದ ಪುನಃಪ್ರತಿಷ್ಠಾಪನೆ; ಎರಡನೆ ಚಾರ್ಲ್ಸನನ್ನು ಇಂಗ್ಲೆಂಡಿನ ರಾಜನಾಗಿ ಮತ್ತೆ ಸ್ಥಾಪಿಸಿದ್ದು.
    2. (ವಿಶೇಷಣವಾಗಿ) 1660ರ (ರಾಜಪ್ರಭುತ್ವದ) ಪುನಃ ಪ್ರತಿಷ್ಠಾಪನೆಯ ನಂತರದ ಸಾಹಿತ್ಯದ ಕಾಲ: Restoration comedy ರೆಸ್ಟೊರೇಷನ್‍ ಕಾಲದ ವೈನೋದಿಕ.