restless ರೆಸ್ಟ್‍ಲಿಸ್‍
ಗುಣವಾಚಕ
  1. ವಿಶ್ರಾಂತಿರಹಿತ:
    1. ವಿಶ್ರಾಂತಿ ಸಿಗದ, ದೊರೆಯದ; ವಿಶ್ರಾಂತಿಯನ್ನೇ ಕಾಣದ; ಹಾಯಾಗಿರಲಾಗದ: the patient was restless from pain ರೋಗಿಗೆ ನೋವಿನಿಂದಾಗಿ ವಿಶ್ರಾಂತಿಯೇ ಸಿಗಲಿಲ್ಲ.
    2. ವಿಶ್ರಾಂತಿ ಕೊಡದ; ವಿಶ್ರಾಂತಿಯೇ ಇಲ್ಲದ: a restless night ವಿಶ್ರಾಂತಿರಹಿತ ರಾತ್ರಿ.
  2. ಅವಿಶ್ರಾಂತ:
    1. ನಿಲ್ಲದೆಯೇ ಇರುವ; ನಿಲುಗಡೆಯೇ ಕಾಣದ; ಸದಾ ನಡೆಯುತ್ತಲೇ ಇರುವ; ಅವಿರತ: restless activity ನಿಲುಗಡೆಯನ್ನೇ ಕಾಣದ ಚಟಿವಟಿಕೆ; ಅವಿರತ ಕಾರ್ಯಕಲಾಪ.
    2. ಸ್ವಸ್ಥವಾಗಿ ಒಂದೆಡೆ ನಿಲ್ಲದ; ಸದಾ ಓಡಾಟದಲ್ಲೇ ಇರುವ; ಅಸ್ತಿಮಿತ: restless by nature, he is always moving about ಒಂದೆಡೆ ನಿಲ್ಲುವ ಸ್ವಭಾವದವನಲ್ಲದ ಅವನು ಸದಾ ಅಲೆದಾಡುತ್ತಲೇ ಇರುತ್ತಾನೆ.
  3. ಚಂಚಲ; ನಿಶ್ಚಲವಾಗಿರಲಾರದ; ಪ್ರಶಾಂತವಾಗಿರಲಾರದ; ಸದಾ ಪ್ರಕ್ಷುಬ್ಧಸ್ಥಿತಿಯಲ್ಲಿರುವ: a restless sea ಸದಾ ಪ್ರಕ್ಷುಬ್ಧವಾಗಿರುವ ಸಮುದ್ರ.
  4. (ರೂಪಕವಾಗಿ) ತಳಮಳಿಸುತ್ತಿರುವ; ದುಗುಡಗೊಂಡ ಮನಸ್ಸಿನ; ಶಾಂತಿಯಿಲ್ಲದ; ಅಶಾಂತ: the poet’s restless mood ಈ ಕವಿಯ ತಳಮಳಿಸುತ್ತಲೇ ಇರುವ ಮನಃಸ್ಥಿತಿ, ಅಶಾಂತ ಮನೋವೃತ್ತಿ.
  5. ಸುಮ್ಮನಿರಲಾರದ; ಚಡಪಡಿಸುತ್ತಿರುವ; ತಾಳ್ಮೆಯೇ ಇಲ್ಲದ; ಅಶಾಂತ ಪ್ರವೃತ್ತಿಯ: a restless crowd ಚಡಪಡಿಸುತ್ತಿದ್ದ ಗುಂಪು; ಅಶಾಂತ ಜನ ಜಂಗುಳಿ.