restive ರೆಸ್ಟಿವ್‍
ಗುಣವಾಚಕ
  1. (ಕುದುರೆ ಮೊದಲಾದ ಪ್ರಾಣಿಗಳ ವಿಷಯದಲ್ಲಿ) (ಮುಂದೆ ಓಡದೆ ನಿಂತೇ ಬಿಡುವುದು, ಅಡ್ಡಡ್ಡ ನಡೆಯುವುದು, ಹಿಂದುಹಿಂದಕ್ಕೆ ಹೋಗುವುದು, ಮೊದಲಾದ ಚೇಷ್ಟೆ ಮಾಡುತ್ತ) ಕಣಿಹಾಕುವ; ತುಂಟ; ತುಂಟತನದ; ತುಂಟಾಟದ; ತಂಟೆಕೋರ; ತಕರಾರಿನ: a restive horse ತಂಟೆ ಕುದುರೆ, a restive ox ಕಣಿಹಾಕುವ ಎತ್ತು.
  2. (ವ್ಯಕ್ತಿಯ ವಿಷಯದಲ್ಲಿ) ಮೊಂಡ; ಮೊಂಡುತನದ; ಹತೋಟಿಗೆ ಬಾರದ; ಅಂಕೆಗೊಳಪಡದ; ನಯನೀತಿಗೆ ಜಗ್ಗದ; ಅಂಕೆಮೀರುವ; ಉಚ್ಛೃಂಖಲ: a restive boy ಮೊಂಡಹುಡುಗ.
  3. ಚಡಪಡಿಸುತ್ತಿರುವ; ಅಶಾಂತ(ಪ್ರವೃತ್ತಿಯ): a restive audience ಚಡಪಡಿಸುವ ಶ್ರೋತೃವೃಂದ.