restitution ರೆಸ್ಟಿಟ್ಯೂಷನ್‍
ನಾಮವಾಚಕ
  1. ಪುನರ್ವಶ; ಪುನಸ್ಸ್ವಾಧೀನ; ಪುನಃಪ್ರದಾನ; (ನಿಜವಾದ ಮಾಲಿಕನಿಗೆ) ಕಳೆದುಕೊಂಡಿರುವ, ನಷ್ಟವಾಗಿರುವ ಯಾ ವಶ ತಪ್ಪಿಹೋಗಿರುವ ಅವನ ವಸ್ತುವನ್ನು ಹಿಂದಿರುಗಿಸಿ ಕೊಡುವುದು, ತಂದು ಕೊಡುವುದು, ಪಡೆಯುವಂತೆ ಮಾಡುವುದು.
  2. ಪರಿಹಾರ; ನಷ್ಟಭರ್ತಿ; ಅನ್ಯಾಯಕ್ಕೆ, ನಷ್ಟಕ್ಕೆ ಗುರಿಯಾದವನಿಗೆ ಅದಕ್ಕಾಗಿ ಪರಿಹಾರ ನೀಡುವುದು, ನಷ್ಟ ತುಂಬಿಕೊಡುವುದು.
  3. (ವಸ್ತು ಯಾ ವಿಷಯವನ್ನು ಅದರ) ಪೂರ್ವಸ್ಥಿತಿಗೆ ತರುವುದು.
  4. (ಮುಖ್ಯವಾಗಿ ದೇವಸ್ಥಾನ) ಜೀರ್ಣೋದ್ಧಾರ; (ಚರ್ಚು, ಮಠ ಯಾ ಹೀನಸ್ಥಿತಿಗೆ ಬಂದಿರುವ ಸಂಪ್ರದಾಯ ಮೊದಲಾದವನ್ನು) ಹಿಂದಿನ ಉತ್ತಮ ಸ್ಥಿತಿಗೆ ತರುವುದು: the restitution of all things to their first state of perfection (ಲೋಕದ) ಸಕಲವನ್ನೂ ಆದಿಯಲ್ಲಿದ್ದ ಪರಿಪೂರ್ಣಸ್ಥಿತಿಗೆ ತರುವುದು.
  5. (ಸ್ಥಿತಿಸ್ಥಾಪಕಶಕ್ತಿ ಬಲದಿಂದ) ಪೂರ್ವಸ್ಥಿತಿಯನ್ನು, ಹಿಂದಿದ್ದ ಆಕಾರ, ಗಾತ್ರ ಮೊದಲಾದವನ್ನು, ಪಡೆಯುವುದು; ಪೂರ್ವಸ್ಥಿತಿ ಲಾಭ; ಪೂರ್ವಾವಸ್ಥಾ ಪ್ರಾಪ್ತಿ.
ಪದಗುಚ್ಛ

restitution of conjual rights

  1. ದಾಂಪತ್ಯ ಹಕ್ಕುಗಳ ಪುನಃಪ್ರದಾನ.
  2. ದಾಂಪತ್ಯ ಹಕ್ಕುಗಳ ಪುನಃಪ್ರದಾನದ ಮೊಕದ್ದಮೆ.