responsive ರಿಸ್ಪಾನ್ಸಿವ್‍
ಗುಣವಾಚಕ
  1. ಉತ್ತರ ಕೊಡುವ; ಜವಾಬು ಹೇಳುವ.
  2. ಉತ್ತರರೂಪದ; ಜವಾಬಾಗಿ ತೋರಿಸಿದ ಯಾ ಮಾಡಿದ.
  3. (ಚರ್ಚು) (ಸಾಮುದಾಯಿಕ ಪ್ರಾರ್ಥನೆಯಲ್ಲಿ ಬಳಸುವ) ಪ್ರತ್ಯುತ್ತರಗೀತೆಯ; ಪ್ರತ್ಯುತ್ತರ ಗೀತೆಗಳನ್ನೊಳಗೊಂಡ.
  4. ಪ್ರತಿಕ್ರಿಯೆ ತೋರಿಸುವ; ಪ್ರತಿಕ್ರಿಯಾಶೀಲ; ಸಂವೇದನ ಶೀಲ; ಯಾವುದೇ ಪ್ರಚೋದನೆಗೆ ತಕ್ಕ ಸಂವೇದನೆಯನ್ನು ತೋರಿಸುವ.
  5. (ಯಾವುದೇ ಪ್ರಭಾವ ಮೊದಲಾದವಕ್ಕೆ) ಸರಾಗವಾಗಿ ಪಕ್ಕಾಗುವ; ಸುಲಭವಾಗಿ ಒಳಗಾಗುವ; ಪ್ರಭಾವನೀಯ.
  6. (ಉತ್ತಮ ಪ್ರಭಾವ ಮೊದಲಾದವಕ್ಕೆ) ಸಹಾನುಭೂತಿಯುಳ್ಳ; ಸಹಾನುಭೂತಿ ತೋರಿಸುವ.