responsibility ರಿಸ್ಪಾನ್ಸಿಬಿಲಿಟಿ
ನಾಮವಾಚಕ
(ಬಹುವಚನ responsibilities).
  1. ಹೊಣೆಗಾರಿಕೆ; ಜವಾಬ್ದಾರಿ; ಉತ್ತರದಾಯಿತ್ವ: he declines responsibility for the deed ಆ ಕೃತ್ಯಕ್ಕೆ ಸಂಬಂಧಿಸಿದಂತೆ ತನ್ನ ಹೊಣೆಗಾರಿಕೆಯನ್ನು ನಿರಾಕರಿಸುತ್ತಾನೆ. he is not afraid of responsibility ಹೊಣೆಗಾರಿಕೆಯನ್ನು ಹೊರಲು ಅವನು ಅಂಜುವುದಿಲ್ಲ; ಸ್ವಂತ ಜವಾಬ್ದಾರಿಯಿಂದ ವರ್ತಿಸಲು, ಕರ್ತವ್ಯ ನಿರ್ವಹಿಸಲು, ಅವನು ಹೆದರುವುದಿಲ್ಲ.
  2. ಜವಾಬ್ದಾರಿಯ ವಿಷಯ, ಕೆಲಸ; (ಹೊತ್ತ) ಹೊಣೆ; (ಜವಾಬ್ದಾರಿ ವಹಿಸಿಕೊಟ್ಟ ಯಾ ವಹಿಸಿಕೊಂಡ) ಕಾರ್ಯಭಾರ, ಕರ್ತವ್ಯ: managing such an institution is a great responsibility ಇಂತಹ ಒಂದು ಸಂಸ್ಥೆಯ ಕಾರ್ಯವನ್ನು ನೋಡಿಕೊಳ್ಳುವುದು ಒಂದು ಭಾರಿ ಹೊಣೆ.
ಪದಗುಚ್ಛ

on one’s own responsibility ತನ್ನ ಸ್ವಂತ ಯಾ ವೈಯಕ್ತಿಕ ಜವಾಬ್ದಾರಿಯ ಮೇಲೆ; ಅನಧಿಕೃತವಾಗಿ.