response ರಿಸ್ಪಾನ್ಸ್‍
ನಾಮವಾಚಕ
    1. ಉತ್ತರ; ಜವಾಬು: in response to (ಪ್ರಶ್ನೆ ಮೊದಲಾದವಕ್ಕೆ) ಜವಾಬಾಗಿ. he made no response ಅವನು ಉತ್ತರವನ್ನೇ ಕೊಡಲಿಲ್ಲ.
    2. ಕಾರ್ಯರೂಪದಲ್ಲಿ ಕೊಟ್ಟ ಉತ್ತರ, ಜವಾಬು: his response to the people’s revolt was to proclaim martial law ಜನತೆಯ ಬಂಡಾಯಕ್ಕೆ ಅವನು ಕೊಟ್ಟ ಜವಾಬೆಂದರೆ ಲಷ್ಕರಿ ಶಾಸನವನ್ನು ಘೋಷಿಸಿದ್ದು.
  1. (ಯಾವುದೇ ಪ್ರಚೋದನೆಗೆ ಪ್ರತಿಯಾಗಿ ತೋರಿಸುವ) ಪ್ರತಿಮನೋವೃತ್ತಿ ಯಾ ಪ್ರತಿವರ್ತನೆ ಯಾ ಪ್ರತಿಕ್ರಿಯೆ: the appeal called forth no response in his breast ಆ ಮನವಿ ಅವನ ಎದೆಯಲ್ಲಿ ಯಾವುದೇ ಪ್ರತಿಕ್ರಿಯೆಯನ್ನೂ ಮೂಡಿಸಲಿಲ್ಲ.
  2. (ಚರ್ಚು)
    1. = responsory.
    2. (ಸಾಮೂಹಿಕ ಪ್ರಾರ್ಥನೆಯಲ್ಲಿ ಹಾಡುವ) ಪ್ರತ್ಯುತ್ತರ ಗೀತೆ.
  3. (ಬ್ರಿಡ್ಜ್‍) ಜವಾಬಾಗಿ ಹೇಳಿದ ಪಟ್ಟು.