See also 2respond
1respond ರಿಸ್ಪಾಂಡ್‍
ಅಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಚರ್ಚಿನಲ್ಲಿ ಪಾದ್ರಿಯು ಕೇಳುವ ಶಾಸ್ತ್ರೋಕ್ತ ಪ್ರಶ್ನೆಗಳಿಗೆ ಯಾ ಪಠಿಸುವ ಶಾಸ್ತ್ರೋಕ್ತ ವಾಕ್ಯಗಳಿಗೆ) ಪ್ರತ್ಯುತ್ತರ ಹೇಳು; ಉತ್ತರಕೊಡು: respond to the catechism (ಧರ್ಮದ ಶಿಕ್ಷಣದಲ್ಲಿ ಕೇಳುವ) ಪ್ರಶ್ನಾವಳಿಗೆ ಪ್ರತ್ಯುತ್ತರ ಕೊಡು.
  2. ಉತ್ತರಿಸು; ಉತ್ತರಕೊಡು: he responded briefly to the question ಆ ಪ್ರಶ್ನೆಗೆ ಅವನು ಸಂಗ್ರಹವಾಗಿ ಉತ್ತರ ಕೊಟ್ಟ.
  3. (ಕಾರ್ಯತಃ) ಜವಾಬುಕೊಡು; ಕ್ರಿಯೆಗೆ ಬದಲು (ಅದೇ ಬಗೆಯ) ಕ್ರಿಯೆ ಮಾಡು: he responded with a drop-kick (ಹುಟ್‍ಬಾಲ್‍ ಆಟದಲ್ಲಿ, ಎದುರಾಳಿಯ ಒದೆತಕ್ಕೆ ಪ್ರತಿಯಾಗಿ) ಮೇಲೊದೆತದ ಜವಾಬು ಕೊಟ್ಟ.
    1. ಪ್ರತಿಕ್ರಿಯಿಸು; ಪ್ರತಿಕ್ರಿಯೆ ತೋರಿಸು: respond to a stimulus ಪ್ರೇರಣೆಗೆ ತಕ್ಕ ಪ್ರತಿಕ್ರಿಯೆ ತೋರಿಸು.
    2. ಪ್ರತಿಸ್ಪಂದಿಸು: the string responds to the note ತಂತಿಯು ಸ್ವರಕ್ಕೆ ಪ್ರತಿಸ್ಪಂದಿಸುತ್ತದೆ.
  4. (ವಿರಳ ಪ್ರಯೋಗ ಮತ್ತು ಪ್ರಾಚೀನ ಪ್ರಯೋಗ) (ಯಾವುದೇ ವಸ್ತುವಿಗೆ ಯಾ ವಿಷಯಕ್ಕೆ) ಹೊಂದಿಕೆಯಾಗಿರು; ಅನುಗುಣ ಯಾ ಅನುರೂಪ ಆಗಿರು; ಸದೃಶ್ಯವಾಗಿರು; ಸಂವಾದಿಯಾಗಿರು.
  5. (ಬ್ರಿಡ್ಜ್‍) (ಜೊತೆಗಾರನ ಹಿಂದಿನ ಪಟ್ಟುಗಳ ಮೇಲಿನ ಆಧಾರದ ಮೇಲೆ) ಪ್ರತಿಪಟ್ಟು ಹೇಳು.
ಸಕರ್ಮಕ ಕ್ರಿಯಾಪದ

ಉತ್ತರವಾಗಿ (ಯಾವುದನ್ನೇ) ಹೇಳು.

See also 1respond
2respond ರಿಸ್ಪಾಂಡ್‍
ನಾಮವಾಚಕ
    1. (ಕ್ರೈಸ್ತಧರ್ಮ)= responsory.
    2. ಸಾಮೂಹಿಕ ಪ್ರಾರ್ಥನೆಯಲ್ಲಿ ಪ್ರತ್ಯುತ್ತರ ಗೀತೆ.
  1. (ವಾಸ್ತುಶಿಲ್ಪ) (ಕಮಾನಿಗೆ ಊರೆಯಾಗಿ ಗೋಡೆಗೆ ಸೇರಿಸಿ ಕಟ್ಟಿರುವ) ಅರೆಗಂಬ.