respectable ರಿಸ್ಟೆಕ್ಟಬ್‍ಲ್‍
ಗುಣವಾಚಕ
  1. ಮರ್ಯಾದೆಗೆ ತಕ್ಕ; ಮರ್ಯಾದೆ ಸಲ್ಲುವ; ಗೌರವಾರ್ಹ; ಗಣ್ಯ: respectable persons ಗಣ್ಯ ವ್ಯಕ್ತಿಗಳು. respectable motives ಗೌರವಾರ್ಹ ಉದ್ದೇಶಗಳು.
  2. (ಗುಣ, ಸಂಖ್ಯೆ, ಪ್ರಮಾಣ ಮೊದಲಾದವುಗಳ ವಿಷಯದಲ್ಲಿ) ತಕ್ಕಮಟ್ಟಿನ; ಇದ್ದ ಮಟ್ಟಿಗೆ ದೊಡ್ಡ ಯಾ ಚೆನ್ನಾಗಿರುವ; ಸುಮಾರಾಗಿ ಸಾಕಷ್ಟು ಯಾ ಚೆನ್ನಾಗಿ ಇರುವ; ಗಣನೀಯ(ವಾದ): a respectable painting ಸುಮಾರಾಗಿ ಚೆನ್ನಾಗಿರುವ ವರ್ಣಚಿತ್ರ. a respectable number ಗಣನೀಯ(ವಾದ) ಸಂಖ್ಯೆ.
    1. (ಸಮಾಜದಲ್ಲಿ) ತಕ್ಕಮಟ್ಟಿನ ಸ್ಥಾನಮಾನಗಳಿರುವ; ಗಣ್ಯ; ಗೌರವಸ್ಥನಾದ.
    2. (ನಡೆನುಡಿ ಮೊದಲಾದವುಗಳಲ್ಲಿ) ಶಿಷ್ಟ; ಯೋಗ್ಯ; ಸಭ್ಯ: respectable rank ಗಣ್ಯವಾದ ಅಂತಸ್ತು. respectable behaviour ಶಿಷ್ಟತೆ; ಸಭ್ಯತೆ; ಯೋಗ್ಯ ನಡೆವಳಿಕೆ.
  3. (ವೃತ್ತಿ, ಉಡಿಗೆತೊಡಿಗೆ, ಹವ್ಯಾಸ ಮೊದಲಾದವುಗಳ ವಿಷಯದಲ್ಲಿ) ಯೋಗ್ಯ; ಗೌರವಸ್ಥರಿಗೆ ತಕ್ಕ; ಮರ್ಯಾದಸ್ತರಿಗೆ ಸಲ್ಲುವ: respectable dress ಯೋಗ್ಯ–ಉಡುಪು, ಪೋಷಾಕು.
  4. ತಕ್ಕಷ್ಟು–ಒಳ್ಳೆಯ, ಸಮರ್ಥ: a respectable try ತಕ್ಕಷ್ಟು ಒಳ್ಳೆಯ ಪ್ರಯತ್ನ.
  5. ಸ್ಥಿತಿಯಲ್ಲಿ ಯಾ ನೋಟಕ್ಕೆ ತಕ್ಕಷ್ಟು ಚೆನ್ನಾಗಿರುವ.
  6. ಬಿಂಕದ ಸಾಂಪ್ರದಾಯಿಕತೆಯ; ಬಿಗುಮಾನದಿಂದ, ಶ್ರೀಮದ್ಗಾಂಭೀರ್ಯದಿಂದ, ವಿನಯಾಡಂಬರದಿಂದ–ಸಾಂಪ್ರದಾಯಿಕತೆ ತೋರುವ, ನಟಿಸುವ.