resourceless ರಿಸೋ(ಸೋ)ರ್ಸ್‍ಲಿಸ್‍
ಗುಣವಾಚಕ
  1. ಜೀವನೋಪಾಯ ಇಲ್ಲದೆ; ನಿರ್ಗತಿಕ: the resourceless poor ಜೀವನೋಪಾಯವಿಲ್ಲದ ಬಡವರು.
  2. ಉಪಾಯರಹಿತ; ನಿರುಪಾಯ; ಗತಿಯೇ ಇಲ್ಲದ; ಯಾವ ದಾರಿಯೂ ಇಲ್ಲದ: he is laid waste, yet he is not resourceless ಅವನ ಸರ್ವಸ್ವವೂ ಹಾಳಾಗಿದೆ, ಆದರೂ ಅವನು ತೀರ ನಿರುಪಾಯನಾಗಿಲ್ಲ.
  3. ವ್ಯವಹಾರಕೌಶಲವಿಲ್ಲದ: resourceless persons cannot tackle any problem ವ್ಯವಹಾರಕೌಶಲವಿಲ್ಲದವರು ಯಾವ ಸಮಸ್ಯೆಯನ್ನೂ ನಿರ್ವಹಿಸಲಾರರು.
  4. (ಹೊತ್ತು ಕಳೆಯಲು ಯಾವುದೇ ಸ್ವಾರಸ್ಯಕರ) ಹವ್ಯಾಸವಿಲ್ಲದ: resourceless people cannot deal with their leisure ಯಾವೊಂದು ಹವ್ಯಾಸವೂ ಇಲ್ಲದವರು ತಮ್ಮ ವಿರಾಮವನ್ನೇನು ಮಾಡಬೇಕೆಂದೇ ಅರಿಯರು.