resource ರಿಸೋ(ಸೋ)ರ್ಸ್‍
ನಾಮವಾಚಕ
  1. (ಸಾಮಾನ್ಯವಾಗಿ ಬಹುವಚನದಲ್ಲಿ)
    1. ಆವಶ್ಯಕತೆಯ ಪೂರೈಕೆ ಸಾಧನ; ಆವಶ್ಯಕತೆಯನ್ನು ಪೂರೈಸುವ ವಸ್ತುಗಳ ದಾಸ್ತಾನು ಯಾ ಸರಬರಾಜು.
    2. (ಉದ್ದೇಶವೊಂದನ್ನು ಸಾಧಿಸಲು, ಕರ್ತವ್ಯವೊಂದನ್ನು ನೆರವೇರಿಸಲು ಮೊದಲಾದವುಗಳಿಗಾಗಿ ಲಭ್ಯವಿರುವ) ಸಾಧನ; ಉಪಾಯ; ಮಾರ್ಗ; ಹಾದಿ.
    3. (ಅಮೆರಿಕನ್‍ ಪ್ರಯೋಗ) ಲಭ್ಯ ಆಸ್ತಿಪಾಸ್ತಿ.
  2. (ಬಹುವಚನದಲ್ಲಿ) (ಯಾವುದೇ ದೇಶದ ಪೋಷಣೆ ಹಾಗೂ ರಕ್ಷಣೆಗೆ ಅಗತ್ಯವಾದ ಆ ದೇಶದ) ಸಾಧನ ಸಂಪತ್ತು; ಮೂಲಸಂಪತ್ತು.
  3. (ಪ್ರಾಚೀನ ಪ್ರಯೋಗ) ನೆರವಿನ ಸಂಭವ; ಸಹಾಯ (ಒದಗುವ) ಸಾಧ್ಯತೆ: lost without resource ನೆರವಿನ ಸಂಭವ ಇಲ್ಲದೆ ಗತಿಗೆಟ್ಟ, ಗತಿಯಿಲ್ಲದ.
  4. ಸಾಧನ; ಉಪಾಯ; ಗತಿ; ದಾರಿ; ಮಾರ್ಗ: flight was his only resource ಪಲಾಯನವೊಂದೇ ಅವನಿಗಿದ್ದ ಉಪಾಯ, ಗತಿ.
  5. (ವಿರಾಮ ಕಳೆಯಲು, ಹೊತ್ತು ಕಳೆಯಲು, ನೆರವಾಗುವ) ಸ್ವಾರಸ್ಯಕರ ಉದ್ಯೋಗ, ಕೆಲಸ; ಹವ್ಯಾಸ: time is hanging heavily on him, as he is a man of no resources ಹೊತ್ತು ಕಳೆಯುವುದೇ ಅವನಿಗೊಂದು ಭಾರ, ಏಕೆಂದರೆ ಅವನಿಗೆ ಯಾವೊಂದು ಹವ್ಯಾಸವೂ ಇಲ್ಲ.
  6. ವ್ಯವಹಾರ ಕೌಶಲ; ಉಪಾಯ ಚಾತುರ್ಯ; ಸಮಸ್ಯೆಗಳಿಗೆ ಉಪಾಯಗಳನ್ನು ಕೂಡಲೇ ಕಂಡುಹಿಡಿಯುವ ಜಾಣ್ಮೆ: he is a person of great resource, he can deal with any problem ಅವನಿಗೆ ತುಂಬ ವ್ಯವಹಾರ ಕೌಶಲವಿದೆ, ಯಾವುದೇ ಸಮಸ್ಯೆಯನ್ನು ನಿರ್ವಹಿಸಬಲ್ಲ.
  7. ಜಾಣತನ; ಚುರುಕು ಬುದ್ಧಿ: full of resource ತುಂಬ ಜಾಣತನವಿರುವ.
ಪದಗುಚ್ಛ

one’s own resources ತನ್ನ ಸ್ವಂತ ಶಕ್ತಿ, ಸ್ವಸಾಮರ್ಥ್ಯ ಮೊದಲಾದವು.