resonant ರೆಸನಂಟ್‍
ಗುಣವಾಚಕ
  1. ಅನುರಣಕ:
    1. ಅನುರಣಿಸುವ ಯಾ ಅನುರಣನಕ್ಕೆ ಸಂಬಂಧಿಸಿದ.
    2. (ಧ್ವನಿಯ ವಿಷಯದಲ್ಲಿ) ಪ್ರತಿಫಲನದ ಯಾ ಮೇಳಯಿಸುವ ಕಂಪನದ ಫಲವಾಗಿ ಅನುರಣಿಸುವ ಮತ್ತು ದೀರ್ಘಕಾಲ ಮುಂದುವರಿಯುವ.
    3. (ಕಾಯ ಯಾ ಕೊಠಡಿಯ ವಿಷಯದಲ್ಲಿ) ಅನುರಣನಕ್ಕೆ ಅನುಕೂಲವಾಗಿರುವ.
  2. (ಸ್ಥಳಗಳ ವಿಷಯದಲ್ಲಿ) ಹೊಳಲು ಕೊಡುತ್ತಿರುವ; ಪ್ರತಿಧ್ವನಿತವಾಗುತ್ತಿರುವ; ಅನುರಣಿಸುವ (ರೂಪಕವಾಗಿ ಸಹ).