See also 2resolve
1resolve ರಿಸಾಲ್ವ್‍
ಸಕರ್ಮಕ ಕ್ರಿಯಾಪದ
  1. (ಗತಪ್ರಯೋಗ) ಕರಗಿಸಿಬಿಡು; ದ್ರವೀಕರಿಸು; ನೀರಾಗಿಸಿಬಿಡು; ಲಯಗೊಳಿಸಿಬಿಡು.
    1. ಘಟಕಾಂಶಗಳಾಗಿ ಒಡೆ; ವಿಘಟಿಸು; ವಿದಳನಮಾಡು: he used vinegar to resolve the rocks ಬಂಡೆಗಳನ್ನು ವಿಘಟಿಸಲು ಅವನು ಸಿರ್ಕವನ್ನು ಬಳಸಿದ.
    2. (ಗಣಿತದಲ್ಲಿ) ಅಪವರ್ತಿಸು; ಮೂಲಾಂಶಗಳಾಗಿ ವಿಭಜಿಸು; ಮಾಲಾಂಶಗಳ ರೂಪಕ್ಕೆ ತರು: resolve into its elements (ಅದನ್ನು) ಅದರ ಮೂಲಾಂಶಗಳಾಗಿ ವಿಭಜಿಸು.
    3. (ಆತ್ಮಾರ್ಥಕ ಯಾ ಅಕರ್ಮಕ ಕ್ರಿಯಾಪದ) ಮೂಲಾಂಶಗಳಾಗಿ ರೂಪಗೊಳ್ಳು; ಮೂಲಾಂಶಗಳ ರೂಪಕ್ಕೆ ಬರು, ಪರಿವರ್ತನೆ ಹೊಂದು: it resolves itself into its elements ಅದು ತನ್ನ ಮೂಲಾಂಶಗಳ ರೂಪಕ್ಕೆ ಬರುತ್ತದೆ.
    4. (ಭೌತವಿಜ್ಞಾನ) ಪೃಥಕ್ಕರಿಸು; (ಬಲ, ವೇಗ, ಮೊದಲಾದ ಸದಿಶವನ್ನು) ಒಟ್ಟಿನಲ್ಲಿ ಅದಕ್ಕೆ ಸಮಾನವಾಗುವ ಎರಡು ಯಾ ಹೆಚ್ಚು ಸದಿಶಗಳಾಗಿ ವಿಘಟಿಸು.
  2. ರೂಪಾಂತರಿಸು; ಯಾವುದೇ ರೂಪಕ್ಕೆ ತರು.
  3. ರೂಪಿಸು; ನಿರೂಪಿಸು: one might resolve Chiristianity into a sysetm of morality ಕ್ರೈಸ್ತಧರ್ಮವನ್ನು ಒಂದು ನೈತಿಕ ವ್ಯವಸ್ಥೆಯನ್ನಾಗಿ ನಿರೂಪಿಸಬಹುದು.
  4. (ಸಂಗೀತ) ಅಪಶ್ರುತಿಯನ್ನು ಸ್ವರಮೇಳವನ್ನಾಗಿ ಪರಿವರ್ತಿತವಾಗಿಸು.
  5. (ಸಂಶಯ, ಸಮಸ್ಯೆ ಮೊದಲಾದವನ್ನು) ಬಗೆಹರಿಸು; ಬಿಡಿಸು; ಪರಿಹರಿಸು: all doubts were resolved ಸಂಶಯಗಳೆಲ್ಲ ಬಗೆಹರಿದುವು. resolve me this (ಪ್ರಾಚೀನ ಪ್ರಯೋಗ) ಈ ಸಮಸ್ಯೆಯನ್ನು ಬಿಡಿಸು, ಪರಿಹರಿಸು.
  6. (ಶಾಸನಸಭೆ ಯಾ ಬಹಿರಂಗ ಸಭೆಯಲ್ಲಿ) ಠರಾವು, ನಿರ್ಣಯ–ಮಾಡು.
  7. (ಪರಿಸ್ಥಿತಿ ಮೊದಲಾದವುಗಳ ವಿಷಯದಲ್ಲಿ,\ ವ್ಯಕ್ತಿಯನ್ನು) ನಿರ್ಧಾರಕ್ಕೆ ತರು; ನಿರ್ಧರಿಸುವಂತೆ ಮಾಡು: circumstances resolved me upon terminating my contract ಕರಾರನ್ನು ಕೊನೆಗಾಣಿಸುವ ನಿರ್ಧಾರಕ್ಕೆ ಪರಿಸ್ಥಿತಿಯು ನನ್ನನ್ನು ತಂದಿತು.
ಅಕರ್ಮಕ ಕ್ರಿಯಾಪದ
  1. ಕರಗಿಹೋಗು; ಲಯವಾಗಿ ಹೋಗು; ದ್ರವೀಭವಿಸು; ನೀರುನೀರಾಗಿ ಹೋಗು: O that this too too solid flesh would melt, and thaw, and resolve itself into a dew! ಅಯ್ಯೋ ವಿಧಿಯೆ, ತೀರ ತೀರ ಗಟ್ಟಿಯಾಗಿರುವ ಈ ನನ್ನ ಹಾಳು ದೇಹ ಕರಗಿ ನೀರು ನೀರಾಗಿ ಲಯವಾಗಿ ಹೋಗಬಾರದೆ!
  2. ( ಅಕರ್ಮಕ ಕ್ರಿಯಾಪದ ಯಾ ಆತ್ಮಾರ್ಥಕ) ಕರಗಿ ಹೋಗು; ಕ್ರಮೇಣ ಅಳಿದುಹೋಗಿ ಇಲ್ಲದಾಗು: the tumour resolves itself at last ಕುರುವು ಕೊನೆಗೆ (ಕೀವುಗಟ್ಟದೆ) ಕರಗಿಹೋಗುತ್ತದೆ.
  3. ರೂಪಾಂತರವಾಗು; ಯಾವುದೇ ರೂಪಕ್ಕೆ ಬರು; ರೂಪಾಂತರಗೊಳ್ಳು: the House resolves itself into a committee ಪಾರ್ಲಿಮೆಂಟು ಯಾ ಶಾಸನಸಭೆಯು ಒಂದು ಸಮಿತಿಯಾಗಿ ರೂಪಾಂತರಗೊಳ್ಳುತ್ತದೆ.
  4. (ಅಪಶ್ರುತಿಯ ವಿಷಯದಲ್ಲಿ) ಸ್ವರಮೇಳವಾಗಿ ಪರಿವರ್ತಿತವಾಗು.
  5. ಮನಸ್ಸು ಮಾಡು; ನಿರ್ಧರಿಸು; ಸಂಕಲ್ಪಿಸು: I resolved upon making a voyage ಸಮುದ್ರಯಾನ ಮಾಡಬೇಕೆಂದು ನಾನು ಮನಸ್ಸು ಮಾಡಿದೆ.
See also 1resolve
2resolve ರಿಸಾಲ್ವ್‍
ನಾಮವಾಚಕ
  1. ತೀರ್ಮಾನ; ನಿರ್ಧಾರ; ನಿಶ್ಚಯ: she kept her resolve ಆಕೆ ತನ್ನ ನಿರ್ಧಾರದಂತೆ ಬಿಡದೆ ನಡೆದುಕೊಂಡಳು.
  2. (ಕಾವ್ಯಪ್ರಯೋಗ) ಸ್ಥಿರ ಸಂಕಲ್ಪ; ದೃಢನಿಶ್ಚಯ: deeds of high resolve ಸ್ಥಿರಸಂಕಲ್ಪದಿಂದ ಎಸಗಿದ ಕಾರ್ಯಗಳು.
  3. (ಅಮೆರಿಕನ್‍ ಪ್ರಯೋಗ) ಶಾಸಕಾಂಗದ ಯಾ ಸಾರ್ವಜನಿಕ ಸಭೆಯ ವಿಧ್ಯುಕ್ತ ನಿರ್ಣಯ.
  4. ದೃಢತೆ; ದೃಢನಿಶ್ಚಯ; ಸ್ಥಿರನಿರ್ಧಾರ.