resolution ರೆಸಲೂ(ಲ್ಯೂ)ಷನ್‍
ನಾಮವಾಚಕ
  1. (ಗಣಿತ, ರಸಾಯನವಿಜ್ಞಾನ, ಮೊದಲಾದದ್ದು) ವಿಶ್ಲೇಷಣ; ಯಾವುದೇ ತೊಡಕನ್ನು ಬಿಡಿಸುವುದು; ಕ್ಲಿಷ್ಟವಾದ ವಿಷಯವನ್ನು ಅಂಶಅಂಶವಾಗಿ ಬೇರ್ಪಡಿಸುವುದು.
  2. (ಭೌತವಿಜ್ಞಾನ) ಪೃಥಕ್ಕರಣ:
    1. ಪೃಥಕ್ಕರಣ ಸಾಮರ್ಥ್ಯ; ಮಾಪನ ಉಪಕರಣವೊಂದರ ನೆರವಿನಿಂದ ಅಳೆಯಬಹುದಾದ ಕನಿಷ್ಠ ಅವಧಿ.
    2. (ಬಲ, ವೇಗ, ಮೊದಲಾದ ಸದಿಶ(vector)ಕ್ಕೆ ಸಂಬಂಧಿಸಿದಂತೆ) ಯಾವ ಎರಡು ಅಥವಾ ಹೆಚ್ಚು ಸದಿಶಗಳು ಒಟ್ಟಾಗಿ ಅದಕ್ಕೆ ಸಮಾನವಾಗುವುವೋ ಅಂಥ ಸದಿಶಗಳಾಗಿ ಅದನ್ನು ವಿಘಟಿಸುವುದು.
  3. (ವೈದ್ಯಶಾಸ್ತ್ರ) ಶಮನ; ಕೆರಳಿದ ಊತಕ ಮೊದಲಾದವು ಕೀವುಗಟ್ಟದೆ ಅಡುಗುವುದು, ಕಣ್ಮರೆಯಾಗುವುದು.
  4. (ಛಂದಸ್ಸು) ಒಂದು ಗುರುವಿಗೆ ಯಾ ದೀರ್ಘವಾದ ಮಾತ್ರೆಗೆ, ಬದಲಾಗಿ ಎರಡು ಲಘುಗಳನ್ನು ಯಾ ಹ್ರಸ್ವ ಮಾತ್ರೆಗಳನ್ನು ಬಳಸುವುದು.
  5. (ಸಂಗೀತ) ಅಪಶ್ರುತಿಯನ್ನು ಸುಶ್ರುತಿಯನ್ನಾಗಿ ಮಾರ್ಪಡಿಸುವುದು; ಸ್ವರಮೇಳಕ್ಕೆ ಸೇರದ ಸ್ವರವನ್ನು ಸರಿಪಡಿಸಿ ಮೇಳಕ್ಕೆ ಕೂಡಿಸುವುದು.
  6. (ನಾಟಕ) ನಿರ್ವಹಣ; ನಾಟಕದ ವಸ್ತುವಿನ ಯಾ ಕ್ರಿಯೆಯ ಜಟಿಲತೆಯನ್ನು ಕ್ರಮೇಣ ಬಿಡಿಸಿ ಸಹಜವಾದ ಪರಿಸಮಾಪ್ತಿಗೆ ಸಿದ್ಧಗೊಳಿಸುವುದು.
  7. (ರಸಾಯನವಿಜ್ಞಾನ) ವಿಶ್ಲೇಷಣೆ:
    1. ಸಂಯುಕ್ತ ಒಂದನ್ನು ಇನ್ನೂ ಸರಳವಾದ ಸಂಯುಕ್ತ ಯಾ ಧಾತುವಾಗಿ ವಿಭಜಿಸುವುದು.
    2. ಇನ್ನೂ ಸರಳರೂಪಕ್ಕೆ ಪರಿವರ್ತಿಸುವುದು.
  8. ಯಾವುದೇ ಸಮಸ್ಯೆಯನ್ನು ಯಾ ಸಂಶಯವನ್ನು ಪರಿಹರಿಸವುದು; (ಸಮಸ್ಯೆಯ) ಪರಿಹಾರ; ನಿವಾರಣೆ.
    1. (ಶಾಸನಸಭೆ, ಬಹಿರಂಗ ಸಭೆ ಮೊದಲಾದವುಗಳಲ್ಲಿ ಯಾವುದೇ ವಿಷಯವನ್ನು ಕುರಿತು ಮಾಡಿದ) ಠರಾವು; ನಿರ್ಣಯ; ತೀರ್ಮಾನ.
    2. ಠರಾವಿನ ಕರಡುರೂಪ.
  9. ಪ್ರತಿಜ್ಞೆ; ಸಂಕಲ್ಪ; ಪ್ರಮಾಣ; ನಿಶ್ಚಯ: good resolutions (ನಡೆ ನುಡಿಯನ್ನು ತಿದ್ದಿಕೊಳ್ಳಬೇಕೆಂಬ) ಸತ್ಸಂಕಲ್ಪಗಳು.
  10. ಚಿತ್ತಸ್ಥೈರ್ಯ; ಮನೋದಾರ್ಢ್ಯ; ಸ್ಥೈರ್ಯಧೈರ್ಯ.