resistance ರಿಸಿಸ್ಟನ್ಸ್‍
ನಾಮವಾಚಕ
  1. ವಿರೋಧಿಸುವುದು; ಎದುರಿಸುವುದು.
  2. ನಿರೋಧಶಕ್ತಿ; ತಡೆದುಕೊಳ್ಳುವ ಶಕ್ತಿ; ತಾಳಿಕೆ: showed resistance to wear and tear ಬಳಸಿ ಸವೆದುಹೋಗುವುದನ್ನು ತಡೆದುಕೊಳ್ಳುವ ಶಕ್ತಿ.
  3. (ಜೀವವಿಜ್ಞಾನ) ಪ್ರತಿಕೂಲ ಪರಿಸ್ಥಿತಿಗಳನ್ನು ತಡೆದುಕೊಳ್ಳುವ ಶಕ್ತಿ.
  4. ಪ್ರತಿರೋಧ; ಒಂದು ಭೌತವಸ್ತು ಇನ್ನೊಂದು ವಸ್ತುವಿನ ಮೇಲೆ ಪ್ರಭಾವ ಬೀರಿ, ಅದನ್ನು ತಡೆಯುವ, ನಿಧಾನ ಮಾಡುವ ಯಾ ನಿಲ್ಲಿಸುವ ಶಕ್ತಿ.
  5. (ಭೌತವಿಜ್ಞಾನ) ರೋಧ; ತಡೆ; ವಿದ್ಯುತ್ತಿನ ಹರಿವಿಗೆ ಯಾವುದೇ ವಾಹಕವು ಉಂಟುಮಾಡುವ ಅಡಚಣೆ ಯಾ ಅದರ ಅಳತೆ, ಪ್ರಮಾಣ.
  6. ಪ್ರತಿರೋಧ ಚಳವಳಿ ಯಾ ಸಂಘ; ಮುಖ್ಯವಾಗಿ ಹೊರಗಿನವರು ವಶಪಡಿಸಿಕೊಂಡ ದೇಶದಲ್ಲಿ (ಅಧಿಕಾರ ಶಕ್ತಿಯನ್ನು, ಸರ್ಕಾರವನ್ನು) ವಿರೋಧಿಸುವ ರಹಸ್ಯ ಸಂಘ.
ಪದಗುಚ್ಛ
  1. line of least resistance (ರೂಪಕವಾಗಿ) ಅಡ್ಡಿ ಆತಂಕ ಅತ್ಯಂತ ಕಡಿಮೆ ಇರುವ ಹಾದಿ; ಅತ್ಯಂತ ಸುಲಭಮಾರ್ಗ.
  2. resistance movement = resistance\((6)\).