See also 2resin
1resin ರೆಸಿನ್‍
ನಾಮವಾಚಕ
  1. ರಾಳ; ಗಿಡಮರಗಳಿಂದ ಒಸರುವ, ಘನ ಯಾ ಅರೆ ಘನಸ್ಥಿತಿಯ, ನಸುಹಳದಿ ಬಣ್ಣದ, ನೀರಿನಲ್ಲಿ ಅದ್ರಾವ್ಯವೂ ಕಾರ್ಬನಿಕ ದ್ರಾವಕಗಳಲ್ಲಿ ದ್ರಾವ್ಯವೂ ಆದ, ದಹ್ಯ ಪದಾರ್ಥ.
  2. ಕೃತಕ ರಾಳ; ರಾಸಾಯನಿಕ ರಾಳ; ಸಂಶ್ಲೇಷಿತ ರಾಳ; ಸರಳ ಕಾರ್ಬನಿಕ ಸಂಯುಕ್ತಗಳ ಪಾಲಿಮರೀಕರಣದಿಂದ ದೊರೆಯುವ, ಪ್ಲಾಸ್ಟಿಕ್‍ಗಳ ತಯಾರಿಕೆಯಲ್ಲಿ ಬಳಸುವ, ಬೃಹದಣುಗಳ ದ್ರವ ಯಾ ಘನ ಕಾರ್ಬನಿಕ ಸಂಯುಕ್ತ.
ಪದಗುಚ್ಛ

synthetic resin = resin\((2)\).

See also 1resin
2resin ರೆಸಿನ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ resined; ವರ್ತಮಾನ ಕೃದಂತ resining).

ರಾಳದಿಂದ ಉಜ್ಜು ಯಾ ಸಂಸ್ಕರಿಸು.