resile ರಿಸೈಲ್‍
ಅಕರ್ಮಕ ಕ್ರಿಯಾಪದ
  1. (ಸ್ಥಿತಿಸ್ಥಾಪಕತ್ವ ಇರುವ ವಸ್ತುಗಳ ವಿಷಯದಲ್ಲಿ)
    1. ಹಿನ್ನೆಗೆ; ಪುಟಏಳು.
    2. (ವಿಕಸನ ಯಾ ಸಂಕೋಚನಗಳ ತರುವಾಯ) ಪೂರ್ವಸ್ಥಿತಿಗೆ ಮರಳು; ಹಿಂದಿನ ಆಕಾರ, ಗಾತ್ರಗಳನ್ನು ಪಡೆ.
  2. (ರೂಪಕವಾಗಿ) ಪೂರ್ವಸ್ಥಿತಿಗೆ ಹಿಂದಿರುಗು; ಹಿಂದಿನ ನೆಲೆಯನ್ನೇ ಮತ್ತೆ ಹಿಡಿ; ಹಿಂದಿನ ಅಭಿಪ್ರಾಯ, ಭಾವನೆ, ವಾದ, ಸಂಕಲ್ಪ ಮೊದಲಾದವಕ್ಕೆ ಹಿಮ್ಮೆಟ್ಟು: he resiled from the agreement ಒಪ್ಪಂದದಿಂದ ಹಿಮ್ಮೆಟ್ಟಿ ಅವನು ಹಿಂದಿನ ನೆಲೆಯನ್ನೇ ಹಿಡಿದ.
  3. (ದೇಹ, ಮನಸ್ಸು ಮೊದಲಾದವುಗಳ ವಿಷಯದಲ್ಲಿ) ಮತ್ತೆ ಚೇತರಿಸಿಕೊ.
  4. ಒಂದು ಕಾರ್ಯದಿಂದ ಹಿಂತೆಗೆದುಕೊ, ವಾಪಸಾಗು.