resignation ರೆಸಿಗ್ನೇಷನ್‍
ನಾಮವಾಚಕ
  1. (ಹುದ್ದೆ, ಅಧಿಕಾರ, ಹಕ್ಕು, ಆಸ್ತಿ ಮೊದಲಾದವನ್ನು) ಬಿಟ್ಟುಬಿಡುವುದು; ಬಿಟ್ಟುಕೊಡುವುದು; ತ್ಯಾಗ.
    1. (ಮುಖ್ಯವಾಗಿ ಹುದ್ದೆ, ಅಧಿಕಾರ ಮೊದಲಾದವುಗಳ) ರಾಜೀನಾಮೆ.
    2. ರಾಜೀನಾಮೆಪತ್ರ.
  2. (ಹಣೆಯ ಬರಹವೆಂದು, ಪಾಲಿಗೆಬಂದದ್ದೆಂದು ಸಮಾಧಾನ ತಂದುಕೊಂಡು) ತಾಳಿಕೊಳ್ಳಲು ಸಿದ್ಧನಾಗುವುದು; ಅನುಭವಿಸಲು ಅಣಿಯಾಗುವುದು; ವೈರಾಗ್ಯಭಾವ; ವಿರಕ್ತಿ.
  3. (ಭಗವಂತನಿಗೆ ಮಾಡಿಕೊಳ್ಳುವ) ಆತ್ಮ ಸಮರ್ಪಣ; ಆತ್ಮಾರ್ಪಣ.