resign ರಿಸೈನ್‍
ಸಕರ್ಮಕ ಕ್ರಿಯಾಪದ
    1. (ಅಧಿಕಾರ, ಹಕ್ಕು, ಆಸ್ತಿ ಮೊದಲಾದವನ್ನು) ತ್ಯಜಿಸು; ಬಿಟ್ಟುಬಿಡು; ಬಿಟ್ಟುಕೊಡು.
    2. (ಹುದ್ದೆ ಮೊದಲಾದವಕ್ಕೆ) ರಾಜೀನಾಮೆ ಕೊಡು.
    3. ನಿವೃತ್ತಿಹೊಂದು: resigned as Director ನಿರ್ದೇಶಕನಾಗಿ ನಿವೃತ್ತನಾದ.
  1. (ಆಸೆ ಮೊದಲಾದವನ್ನು) ಬಿಟ್ಟುಬಿಡು; ತ್ಯಜಿಸು.
    1. (ಯಾವುದೇ ವಸ್ತು ಯಾ ವಿಷಯವನ್ನು ಒಬ್ಬನಿಗೆ) ಒಪ್ಪಿಸು; ವಹಿಸು; ಒಳಪಡಿಸು: he resigned its responsibility to his friend ಅವನು ಅದರ ಹೊಣೆಯನ್ನು ತನ್ನ ಗೆಳೆಯನಿಗೆ ಒಪ್ಪಿಸಿದ.
    2. (ತನ್ನನ್ನೇ ಒಬ್ಬರಿಗೆ) ಒಪ್ಪಿಸಿಕೊ; ಒಳಪಡಿಸಿಕೊ: he resigned himself to his father’s guidance ಅವನು ತನ್ನನ್ನು ತನ್ನ ತಂದೆಯ ಮಾರ್ಗದರ್ಶನಕ್ಕೆ ಒಪ್ಪಿಸಿಕೊಂಡ.
    3. (ದೇವರಿಗೆ) ಆತ್ಮಸಮರ್ಪಣೆಮಾಡಿಕೊ; ಆತ್ಮನಿವೇದನೆ ಮಾಡಿಕೊ: he resigned himself to God ತನ್ನನ್ನು ಅವನು ದೈವಚಿತ್ತಕ್ಕೆ ಸಮರ್ಪಿಸಿಕೊಂಡ; ಅವನು ಭಗವಂತನಿಗೆ ಆತ್ಮಾರ್ಪಣ ಮಾಡಿಕೊಂಡ.
  2. (ತನ್ನ ಹಣೆಯ ಬರಹವು, ತನ್ನ ಪಾಲಿಗೆ ಬಂದದ್ದು, ಅನಿವಾರ್ಯವೆಂದು) ತಡೆದುಕೊ; ತಾಳಿಕೊ; ಸಮಾಧಾನದಿಂದ ಸಹಿಸಿಕೊ; ಮನಸ್ಸನ್ನು ಗಟ್ಟಿಮಾಡಿಕೊಂಡು ಅನುಭವಿಸು; ವೈರಾಗ್ಯ ತಂದುಕೊ.
ಅಕರ್ಮಕ ಕ್ರಿಯಾಪದ
  1. (ಹುದ್ದೆಯ ಯಾ ಅಧಿಕಾರ ಮೊದಲಾದವುಗಳ ವಿಷಯದಲ್ಲಿ) ರಾಜೀನಾಮೆ ಕೊಡು.
  2. (ಚದುರಂಗ ಮೊದಲಾದವು) ಕೈಬಿಡು; ಮುಂದುವರೆಸದಿರು; ಆಟವನ್ನು ನಿಲ್ಲಿಸು, ಮುಂದುವರಿಸದೆ ಸೋಲನ್ನೊಪ್ಪಿಕೊ.