residence ರೆಸಿಡನ್ಸ್‍
ನಾಮವಾಚಕ
  1. ವಾಸಮಾಡುವಿಕೆ; ವಾಸಿಸುವಿಕೆ; ವಾಸ: take up residence ವಾಸಮಾಡತೊಡಗು. he honoured the place with his residence ತನ್ನ ವಾಸದಿಂದ ಆ ಸ್ಥಳಕ್ಕೊಂದು ಗೌರವ ತಂದ. his residence is required (ಅಧಿಕಾರಿಯ ವಿಷಯದಲ್ಲಿ) ಅವನು ಅಧಿಕಾರ ಸ್ಥಾನವೂ ವಾಸಸ್ಥಾನವೂ ಆಗಿರುವ ಗೃಹದಲ್ಲೇ ವಾಸಿಸುವುದು ಕಡ್ಡಾಯ.
  2. ವಾಸಸ್ಥಾನ; ವಸತಿ; ನಿವಾಸ; ಗೃಹ.
  3. ಆವಾಸ; (ವರಿಷ್ಠ ವ್ಯಕ್ತಿಯ) ವಾಸಿಸುವ ಗೃಹ.
  4. (ಭವ್ಯವಾದ) ಮಹಲು; ಭವನ; ನಿಲಯ; ಮಂದಿರ; ಸದನ; ನಿಕೇತನ; ಪ್ರಾಸಾದ: family residence for sale ಕುಟುಂಬಕ್ಕೆ ಯೋಗ್ಯವಾದ ನಿವಾಸವೊಂದು ಮಾರಾಟಕ್ಕಿದೆ.
ಪದಗುಚ್ಛ

in residence (ಮುಖ್ಯವಾಗಿ ಕರ್ತವ್ಯ ನಿರ್ವಹಿಸಲು ಯಾ ಕೆಲಸ ಮಾಡಲು ನಿರ್ದಿಷ್ಟ ಸ್ಥಳದಲ್ಲಿ) ವಾಸವಾಗಿರುವ; ವಾಸಮಾಡುತ್ತಿರುವ.